ʻರಶ್ಮಿಕಾ ಮದುವೆಗೆ ನನ್ನನ್ನ ಕರೆಯುವುದಿಲ್ಲ ಬಿಡಿ!ʼ ಪ್ರಮೋದ್‌ ಶೆಟ್ಟಿ ಪ್ರತಿಕ್ರಿಯೆ ವೈರಲ್

mail.prabanjas@gmail.com

ರಶ್ಮಿಕಾ ಮಂದಣ್ಣ ಮತ್ತು ವಿಜಯ್‌ ದೇವರಕೊಂಡ ಮದುವೆ ಫೆ.26ರಂದು ಖಾಸಗಿ ಸಮಾರಂಭದಲ್ಲಿ ನಡೆಯಲಿದೆ ಎಂದು ಗಾಸಿಪ್‌ಗಳು ಹರಿದಾಡುತ್ತಿವೆ. ಈ ಕುರಿತು . ಆದರೆ, ಇದನ್ನ ಇನ್ನೂ ಅಧಿಕೃತವಾಗಿ ರಶ್ಮಿಕಾ ಆಗಲಿ, ಅಥವಾ ವಿಜಯ್‌ ಆಗಲಿ ದೃಢೀಕರಿಸಿಲ್ಲ. ಈ ಮಧ್ಯೆ ರಶ್ಮಿಕಾ ಮಂದಣ್ಣ ಮಾಜಿ ಗೆಳೆಯ ರಕ್ಷಿತ್‌ ಶೆಟ್ಟಿ ಅವರ ಆಪ್ತ ಸ್ನೇಹಿತ ಪ್ರಮೋದ್‌ ಶೆಟ್ಟಿ ರಶ್ಮಿಕಾ ಮದುವೆಗೆ ಸಂಬಂಧಿಸಿದಂತೆ ರಿಯಾಕ್ಟ್‌ ಮಾಡಿದ್ದಾರೆ. ಏನಂದ್ರು? ಮುಂದೆ ಓದಿ ತಿಳಿಯಿರಿ..

ಶೇಷʼ ಸಿನಿಮಾದ ಪ್ರಮೋಷನ್‌ಗಾಗಿ ನಟ ಪ್ರಮೋದ್‌ ಶೆಟ್ಟಿ ದಾವಣಗೆರೆಗೆ ಆಗಮಿಸಿದ್ದಾರೆ. ಇದೇ ವೇಳೆ, ʻಗೆ ಹೋಗ್ತೀರಾ?ʼ ಎಂದು ಮಾಧ್ಯಮದವರಿಂದ ಪ್ರಶ್ನೆ ಎದುರಾಗಿದೆ. ಇದಕ್ಕೆ ಉತ್ತರಿಸಿದ ಪ್ರಮೋದ್‌ ಶೆಟ್ಟಿ, “ನನಗೆ ಇನ್ವಿಟೇಶನ್‌ ಬಂದಿಲ್ಲ.. ಬಂದರೆ ಹೋಗ್ತೀನಿ. ಅವರು ನನಗೆ ಇನ್ವಿಟೇಷನ್‌ ಕೊಡಲ್ಲ ಅಂತಲೂ ಗೊತ್ತು. ಅದು ಎಲ್ಲರಿಗೂ ಗೊತ್ತಿರುವ ವಿಚಾರ” ಎಂದು ನಗುತ್ತಾ ರಿಯಾಕ್ಟ್‌ ಮಾಡಿದ್ದಾರೆ.

ಮುಂದುವರೆದು, “ಶೇಷ ಸಿನಿಮಾದ ಪ್ರಮೋಷನ್‌ಗೋಸ್ಕರ ದಾವಣಗೆರೆ ಬಂದಿದ್ದೀವಿ. ಬರೀ ಪ್ರಮೋಷನ್‌ ಅಷ್ಟೇ ಅಲ್ಲ, ಟ್ರೈಲರ್‌ ಲಾಂಚ್‌ ಕೂಡ ದಾವಣಗೆರೆ ಅಲ್ಲೇ ಮಾಡ್ತಿದ್ದೀವಿ. ಕನ್ನಡದ ಟ್ರೈಲರ್‌ ಲಾಂಚ್‌ ಇವತ್ತು ಆಗ್ತಾ ಇದೆ. ಈ ಸಿನಿಮಾ ನೇರವಾಗಿ ಎರಡು ಭಾಷೆಗಳಲ್ಲಿ ಶೂಟ್‌ ಮಾಡಿದ್ದೇವೆ. ಕೆಲವು ಸಿನಿಮಾಗಳನ್ನ ನಾವು ಶೂಟ್‌ ಮಾಡಿ ಬೇರೆ ಭಾಷೆಗೆ ಡಬ್‌ ಮಾಡ್ತೇವೆ. ಆದರೆ, ಈ ಸಿನಿಮಾ ನಾವು ನೇರವಾಗಿ ಕನ್ನಡ ಮತ್ತು ಮಲಯಾಳಂನಲ್ಲಿ ಶೂಟ್‌ ಮಾಡಿರುವುದರಿಂದ, ಎರಡೂ ಬೇರೆ ಬೇರೆ ಸಿನಿಮಾ ರೀತಿಯೇ ನೀವು ತಗೊಬಹುದು” ಎಂದಿದ್ದಾರೆ ಪ್ರಮೋದ್‌ ಶೆಟ್ಟಿ.

ಈ ಸಿನಿಮಾ ವಿಶೇಷತೆ ಏನು ಅಂತಂದರೆ, ಇದಕ್ಕೂ ಹಿಂದೆ ನಾನು ಲಾಫಿಂಗ್‌ ಬುದ್ದ ಅಂತ ಒಂದು ಸಿನಿಮಾ ಮಾಡಿದ್ದೆ. ಆ ಸಿನಿಮಾದಲ್ಲಿ ಆದಷ್ಟು ನೈಜ್ಯತೆಯನ್ನ ತಂದಿದ್ವಿ. ಪೊಲೀಸರ ಕಷ್ಟ ಹೇಗಿರುತ್ತೆ? ಅವರ ಫ್ಯಾಮಿಲಿ ಹೇಗಿರುತ್ತೆ? ಅನ್ನೋದರ ಬಗ್ಗೆ. ಆದರೆ, ಈ ಸಿನಿಮಾದಲ್ಲಿ ನಾವು ಒಂದು ನಂಬಿಕೆಯನ್ನಿಟ್ಟುಕೊಂಡು ಬರ್ತಿದ್ದೇವೆ. ಒಂದು ಸರ್ಕಾರಿ ಕಾಲೇಜು ಅಥವಾ ಸರ್ಕಾರಿ ಶಾಲೆ ಇಲ್ಲ ಅಂತಂದರೆ, ನಮಗೆ ಪ್ರೈವೇಟ್‌ ಕಾಲೇಜು ಅಥವಾ ಶಾಲೆಗಳಿವೆ. ಅದೇ ಒಂದು ಸರ್ಕಾರಿ ಆಸ್ಪತ್ರೆ ಸರಿ ಇಲ್ಲ ಅಂತಂದರೆ, ನಮಗೆ ಪ್ರೈವೇಟ್‌ ಆಸ್ಪತ್ರೆಗಳಿವೆ. ಆದರೆ, ಪೊಲೀಸ್‌ ಸ್ಟೇಷನ್‌ಗೆ ಏನೂ ಪರ್ಯಾಯವಿಲ್ಲ. ನ್ಯಾಯ, ನೀತಿ, ಧರ್ಮವನ್ನ ಸಾರುವಂತಹ ಜಾಗ, ನಮಗೆ ಅಲ್ಲೇ ಅನ್ಯಾಯ ಆದರೆ, ಅದಕ್ಕೆ ಪರ್ಯಾಯ ಮಾರ್ಗವಿಲ್ಲ ಅನ್ನೋ ಕಾನ್ಸೆಪ್ಟ್‌ನ ಇಟ್ಟುಕೊಂಡು ಒಂದು ಅದ್ಭುತ ಕಥೆಯನ್ನ ಮಾಡಿಕೊಂಡಿದ್ದಾರೆ. ಇದನ್ನ ಎರಡು ಭಾಷೆಯಲ್ಲಿ ಮಾಡೋದಕ್ಕೆ ಕಾರಣವೇನೆಂದರೆ, ಪ್ರತಿ ಸಲ ನಾವೆಲ್ಲರೂ ಕೇಳ್ತಾ ಇರ್ತೀವಿ. ಥ್ರಿಲ್ಲರ್‌ ಜಾನರ್‌ಗಳು ಮಲಯಾಳಂನಲ್ಲಿ ತುಂಬಾ ಅದ್ಭುತವಾಗಿ ಬರುತ್ತೆ ಅಂತ. ಈ ಕಥೆಯನ್ನ ತಗೊಂಡು ಬಂದಾಗ, ಈ ಕಥೆ ಮಲಯಾಳಂನಲ್ಲಿ ತುಂಬಾ ಚೆನ್ನಾಗಿ ವರ್ಕ್‌ ಆಗುತ್ತೆ ಅಂತ ಹೇಳಿದ್ರು. ಹಾಗಾಗಿ, ಎರಡೂ ಭಾಗದ ನಟ-ನಟಿಯರನ್ನ ಕರ್ಕೊಂಡು ಈ ಸಿನಿಮಾ ಮಾಡಿದ್ದೀವಿ” ಎಂದರು ಪ್ರಮೋದ್‌ ಶೆಟ್ಟಿ.

Share This Article
Leave a Comment

Leave a Reply

Your email address will not be published. Required fields are marked *