ಉಗುರುಬೆಚ್ಚಗಿನ ನೀರಿನಲ್ಲಿ 1 ಚಮಚ ನೆಲ್ಲಿಕಾಯಿ ಪುಡಿಯನ್ನು ಮಿಕ್ಸ್ ಮಾಡಿ ಕುಡಿಯೋದು ಒಳ್ಳೆಯದು ಯಾಕೆ?

mail.prabanjas@gmail.com

ನೆಲ್ಲಿಕಾಯಿ ಪುಡಿಯನ್ನು ಉಗುರುಬೆಚ್ಚಗಿನ ನೀರಿಗೆ ಮಿಕ್ಸ್ ಮಾಡಿ ಕುಡಿಯೋದ್ರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಎನ್ನುವುದನ್ನು ತಿಳಿಯೋಣ.

ಆಯುರ್ವೇದದಲ್ಲಿ ನೆಲ್ಲಿಕಾಯಿಯನ್ನು ಅತ್ಯುತ್ತಮ ಮನೆಮದ್ದು ಎಂದು ಪರಿಗಣಿಸಲಾಗಿದೆ. ಇದು ವಿಟಮಿನ್ ಸಿ ಯ ಅತ್ಯುನ್ನತ ಮೂಲವಾಗಿದ್ದು, ಇದನ್ನು ತಿನ್ನುವುದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನೆಲ್ಲಿಕಾಯಿ ಕೂದಲು, ಚರ್ಮ ಮತ್ತು ಕಣ್ಣುಗಳಿಗೆ ಹೆಚ್ಚು ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ.

ಪ್ರತಿದಿನ ಒಂದು ನೆಲ್ಲಿಕಾಯಿ ತಿನ್ನುವುದರಿಂದ ನಿಮ್ಮ ದೇಹದ ಅಗತ್ಯಗಳನ್ನು ಸುಲಭವಾಗಿ ಪೂರೈಸಬಹುದು. ನೆಲ್ಲಿಕಾಯಿ ಲಭ್ಯವಿಲ್ಲದಿದ್ದರೆ ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಒಂದು ಟೀಚಮಚ ನೆಲ್ಲಿಕಾಯಿ ಪುಡಿಯನ್ನು ಸೇರಿಸಿ ಕುಡಿಯಿರಿ. ನೆಲ್ಲಿಕಾಯಿ ನೀರು ಕುಡಿಯೋದ್ರಿಂದ ಹಲವಾರು ಪ್ರಯೋಜನಗಳನ್ನು ಪಡೆಯಬಹುದು.

ನೆಲ್ಲಿಕಾಯಿಯು ವಿಟಮಿನ್ ಸಿ ಯಿಂದ ಸಮೃದ್ಧವಾಗಿರುವ ಒಂದು ಸೂಪರ್‌ಫುಡ್ ಆಗಿದೆ. ಇದು ವಿಟಮಿನ್ ಎ, ವಿಟಮಿನ್ ಬಿ ಕಾಂಪ್ಲೆಕ್ಸ್, ಕ್ಯಾಲ್ಸಿಯಂ, ರಂಜಕ, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಕಬ್ಬಿಣದಂತಹ ಪೋಷಕಾಂಶಗಳನ್ನು ಗಣನೀಯ ಪ್ರಮಾಣದಲ್ಲಿ ಹೊಂದಿರುತ್ತದೆ.

ನೆಲ್ಲಿಕಾಯಿಯನ್ನು ಮನೆಗಳಲ್ಲಿ ಉಪ್ಪಿನಕಾಯಿ, ಚಟ್ನಿ ಮತ್ತು ಜಾಮ್‌ಗಳಾಗಿ ಬಳಸಲಾಗುತ್ತದೆ. ಚಳಿಗಾಲದ ಇದು ಋತುವಿನಲ್ಲಿ ಇದು ಹೆಚ್ಚಾಗಿ ಲಭ್ಯವಿರೋದ್ರಿಂದ. ಈ ಸಮಯದಲ್ಲಿ ನೀವು ಪ್ರತಿದಿನ ನೆಲ್ಲಿಕಾಯಿ ರಸವನ್ನು ಕುಡಿಯಬಹುದು. ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ನೆಲ್ಲಿಕಾಯಿ ಪುಡಿಯನ್ನು ಸೇರಿಸಿ ಕುಡಿಯಬಹುದು.

Share This Article
Leave a Comment

Leave a Reply

Your email address will not be published. Required fields are marked *