ಅಮೆರಿಕಾದಲ್ಲಿ ಈ ಬಾರಿಯ ಚಳಿಗಾಲದಲ್ಲಿ ಹಿಮಪಾತದ ತೀವ್ರತೆ ಹೆಚ್ಚಾಗಿದ್ದು, ಕ್ಯಾಲಿಫೋರ್ನಿಯಾದಲ್ಲಿನ ಲೇಕ್ ಟಹೋ ಬಳಿ ಸ್ಕೀಯಿಂಗ್ ಮಾಡಲು ಹೊರಟ್ಟಿದ್ದ 8 ಮಂದಿ ಭಾರಿ ಹಿಮಪಾತಕ್ಕೆ ಬಲಿಯಾಗಿದ್ದು, ಒಬ್ಬರು ಕಾಣೆಯಾಗಿದ್ದಾರೆ. ಹಿಮಪಾತದ ನಡುವೆಯೂ ಸ್ಕಿಯಿಂಗ್ ಮಾಡಲು ಮುಂದಾಗಿದ್ದು, 2 ದಿನಗಳ ಕಾಲ ಅಲ್ಲಿಯೇ ಇದ್ದು, ಹಿಂದಿರುವಾಗ ಸಮಯದಲ್ಲಿ ಈ ಭೀಕರ ದುರಂತ ಸಂಭವಿಸಿದ್ದು, ಇದು ಅಮೆರಿಕಾದ ಇತಿಹಾಸದಲ್ಲೇ ಸುಮಾರು 4 ದಶಕಗಳ ಬಳಿಕ ನಡೆದ ಮಾರಕ ಹಿಮಪಾತ ದುರಂತವಾಗಿದೆ.
ಕ್ಯಾಲಿಫೋರ್ನಿಯಾ: ಅಮೆರಿಕಾದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಂಡ ಹಿಮಪಾತ ಗಳಲ್ಲಿ ಈ ಬಾರಿ ಹಿಮಪಾತ ಮಾರಕವಾಗಿದ್ದು, ಸಾಕಷ್ಟು ತೊಂದರೆಗಳು ಉಲ್ಬಣವಾಗುವಂತೆ ಮಾಡಿದೆ.ಈ ನಡುವೆ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿನ ಕ್ಯಾಸಲ್ ಪೀಕ್ ಪ್ರದೇಶದ ಲೇಕ್ ಟಹೋ ಬಳಿ ಮಂಗಳವಾರ(ಫೆ.17) ಸಂಭವಿಸಿದ ಹಿಮಪಾತದಲ್ಲಿ 8 ಮಂದಿ ಬಲಿಯಾಗಿದ್ದಾರೆ. ಇದು ದ ದುರಂತವಾಗಿದೆ.
ಅಧಿಕಾರಿಗಳ ಪ್ರಕಾರ, ಸಿಯೆರಾ ನೆವಾಡಾದಲ್ಲಿ ಲೇಕ್ ಟಹೋ ಬಳಿಯ ಪರ್ವತಾರೋಹಿಗಳ ಗುಂಪಿನ ಮೇಲೆ ಹಿಮಪಾತ ಅಪ್ಪಳಿಸಿದ್ದು, ಈ ದುರಂತದಲ್ಲಿ 9 ಸ್ಕೀಯರ್ ಗಳು ಕಾಣೆಯಾಗಿದ್ದರು. ರಕ್ಷಣಾ ಕಾರ್ಯಚರಣೆ ಬಳಿಕ 8 ಮಂದಿ ಬ್ಯಾಕ್‌ಕಂಟ್ರಿ ಸ್ಕೀಯರ್‌ಗಳ ಶವ ಪತ್ತೆಯಾಗಿದ್ದು, ಇವರೊಂದಿಗಿದ್ದ ಮತ್ತೊಬ್ಬರು ಕಾಣೆಯಾಗಿದ್ದಾರೆ ತಿಳಿಸಿದ್ದಾರೆ.
4 ದಶಕಗಳಲ್ಲೇ ನಡೆದ ಭೀಕರ ಹಿಮಪಾತ ದುರಂತ
ಈ ಕುರಿತು ಹೇಳಿಕೆ ನೀಡಿದ ನೆವಾಡಾ ಕೌಂಟಿಯ ಅಧಿಕಾರಿ ಶನ್ನನ್ ಮೂನ್ ಪ್ರಕಾರ, ” ಈ ದುರಂತ ಸುಮಾರು 4 ದಶಕಗಳಲ್ಲೇ ಅಂದರೆ 1981ರಿಂದ ಇಲ್ಲಿಯ ತನಕ ಅಮೆರಿಕಾದಲ್ಲಿ ನಡೆದ ಅತ್ಯಂತ ಮಾರಕ ಹಿಮಪಾತ ದುರಂತವಾಗಿದೆ. ಈ ಕುರಿತಂತೆ ಈಗಾಗಲೇ ಮೃತ ಕುಟುಂಬಕ್ಕೆ ಮಾಹಿತಿ ನೀಡಿಲಾಗಿದ ಎಂದು ತಿಳಿಸಿದ್ದಾರೆ.
ಇನ್ನು, ಭಾನುವಾರದಿಂದಲೂ ಈ ಪ್ರದೇಶದಲ್ಲಿ ಹೆಚ್ಚಾಗಿದ್ದು, ಈ ನಡುವೆ ಸ್ಕೀ ಮಾಡಲು ಹೋಗಿದ್ದಾರೆ. ಅಲ್ಲದೆ, ಈ ದುರಂತಕ್ಕೂ ಮುನ್ನ ಆ ದಿನ ಬೆಳ್ಳಿಗೆಯೇ ಹಿಮಪಾತ ಹೆಚ್ಚಾಗಲಿದೆ ಎಂದು ಎಚ್ಚರಿಸಲಾಗಿತ್ತು ಎಂದು ತಿಳಿಸಿದ್ದಾರೆ.
ದುರಂತದ ಬಗ್ಗೆ ಹೆಚ್ಚಿನ ವಿವಿರ ನೀಡಿ” ಕ್ಯಾಲಿಫೋರ್ನಿಯಾದಲ್ಲಿನ ಪ್ರಬಲ ಹಿಮಪಾತದ ನಡುವೆಯೂ ಈ 9 ಮಂದಿ ಸ್ಕೀಯರ್ ಗಳು ಭಾನುವಾರದಿಂದ (ಫೆ.15) 2 ದಿನಗಳು ಡೊನರ್ ಶೃಂಗಸಭೆಯ ಬಳಿಯ ಇಂಟರ್ ಸ್ಟೇಟ್ 80 ರ ಉತ್ತರದಲ್ಲಿರುವ ಕ್ಯಾಸಲ್ ಪೀಕ್ ಪ್ರದೇಶದ ದೂರದ ಫ್ರಾಗ್ ಲೇಕ್ ಸ್ಕೀ ವಿಹಾರಗಳಲ್ಲಿ ಕಳೆದ ನಂತರ ಮಂಗಳವಾರ ಹಿಂತಿರುಗುತ್ತಿದ್ದ ವೇಳೆ ಹಠಾತ್ ಆಗಿ ಸಂಭವಿಸಿದ ಭಾರಿ ಪ್ರಮಾಣದ ಹಿಮಪಾತದಿಂದಾಗಿ ದುರಂತ ಸಂಭವಿಸಿದೆ. ಇದರಲ್ಲಿ 15 ಮಂದಿಯಲ್ಲಿ 6 ಜನರನ್ನು ರಕ್ಷಿಸಲಾಗಿದ್ದು, 3 ಗೈಡ್ ಗಳು ಹಾಗೂ 5 ಸ್ಕೀಯರ್ಸ್ ಸಾವನ್ನಪ್ಪಿ, 1 ಕಾಣೆಯಾಗಿದ್ದಾರೆ” ಎಂದು ತಿಳಿಸಿದ್ದಾರೆ.
ಇದು ಅಮೆರಿಕಾದ ಇತಿಹಾಸದಲ್ಲಿ ಮತ್ತೊಂದು ಭೀಕರ ಹಿಮಪಾತ ದುರಂತಕ್ಕೆ ಕಾರಣವಾಗಿದ್ದು, ಕಾಣೆಯಾಗಿರುವ ವ್ಯಕ್ತಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

