ರಾಷ್ಟ್ರೀಯ ಗೋಕುಲ ಮಿಷನ್: ಸ್ಥಳೀಯ ಗೋತಳಿ ಅಭಿವೃದ್ಧಿಗೆ ಸಹಾಯಧನ; ರೈತರಿಗೆ ವಾರ್ಷಿಕ 21500 ರೂ. ಆದಾಯ; ಅರ್ಜಿ ಸಲ್ಲಿಕೆ ಹೇಗೆ?

mail.prabanjas@gmail.com
ಭಾರತದಲ್ಲಿ ಗೋವುಗಳನ್ನು ಪೂಜನೀಯ ದೃಷ್ಟಿಯಲ್ಲಿ ನೋಡಲಾಗುತ್ತದೆ. ಗೋವುಗಳು ರೈತರ ಜೀವನಾಡಿಯಾಗಿದೆ. ಹೀಗಾಗಿ ಗೋ ತಳಿಗಳ ಅಭಿವೃದ್ಧಿ ಹಾಗೂ ರೈತರಿಗೆ ಅನುಕೂಲಕ ಕಲ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ರಾಷ್ಟ್ರೀಯ ಗೋಕುಲ ಮಿಷನ್ ಎಂಬ ಮಹತ್ವಕಾಂಕ್ಷಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆ ಇದು ಸ್ಥಳೀಯ ಹಸು ಮತ್ತು ಎಮ್ಮೆ ತಳಿಗಳ ಅಭಿವೃದ್ಧಿ, ಸಂರಕ್ಷಣೆ ಮತ್ತು ಹೈನುಗಾರಿಕೆಯನ್ನು ಲಾಭದಾಯಕವಾಗಿಸುವ ಗುರಿಯನ್ನು ಹೊಂದಿದೆ. ಪ್ರಸ್ತುತ ಈ ಯೋಜನೆಯು 2021-2026ರ ಅವಧಿಗೆ ‘ರಾಷ್ಟ್ರೀಯ ಪಶುಧನ ವಿಕಾಸ ಯೋಜನೆ’ಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಹಿನ್ನೆಲೆಯಲ್ಲಿ ಏನಿದು ರಾಷ್ಟ್ರೀಯ ಗೋಕುಲ ಮಿಷನ್? ಇದರಿಂದ ರೈತರಿಗೆ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿಯೋಣ.

ರಾಷ್ಟ್ರೀಯ ಗೋಕುಲ ಮಿಷನ್ ಭಾರತ ಸರ್ಕಾರದ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಇದು 2014 ರಿಂದ 2026ರ ಅವಧಿಯವರೆಗೆ ಸ್ಥಳೀಯ ಗೋತಳಿಗಳ ಸಂರಕ್ಷಣೆ ಮತ್ತು ತಳಿ ಅಭಿವೃದ್ಧಿಗ ಒತ್ತು ನೀಡುತ್ತಿದೆ. ದೇಶೀಯ ಹಸು ಮತ್ತು ಎಮ್ಮೆಗಳ ತಳೀಯ ಸುಧಾರಣೆ ಮಾಡುವುದು, ಹಾಲಿನ ಉತ್ಪಾದಕತೆಯನ್ನು ಹೆಚ್ಚಿಸುವುದು ಮತ್ತು ಗ್ರಾಮೀಣ ರೈತರ, ವಿಶೇಷವಾಗಿ ಮಹಿಳಾ ಪಶುಪಾಲಕರ ಜೀವನೋಪಾಯವನ್ನು ಸುಧಾರಿಸುವುದು ಈ ಯೋಜನೆಯ ಪ್ರಮುಖ ಗುರಿಯಾಗಿದೆ. ಇದಕ್ಕಾಗಿ ಐವಿಎಫ್, ಲಿಂಗ-ವಿಂಗಡಿತ ವೀರ್ಯ ಮತ್ತು ರಾಷ್ಟ್ರವ್ಯಾಪಿ ಕೃತಕ ಗರ್ಭಧಾರಣೆ ಕಾರ್ಯಕ್ರಮಗಳಂತಹ ಸುಧಾರಿತ ವೈಜ್ಞಾನಿಕ ತಂತ್ರಜ್ಞಾನಗಳನ್ನು ಬಳಸಲಾಗುತ್ತಿದೆ. ಸುಸ್ಥಿರ ಹೈನುಗಾರಿಕೆಯನ್ನು ಉತ್ತೇಜಿಸುವ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಹಾಲಿನ ಲಭ್ಯತೆಯನ್ನು ಹೆಚ್ಚಿಸಲು ತ್ತು ಹೈನುಗಾರಿಕೆಯನ್ನು ಲಾಭದಾಯಕ ಉದ್ಯಮವನ್ನಾಗಿ ಮಾಡಲು ಈ ಮಿಷನ್ ಶ್ರಮಿಸುತ್ತಿದೆ.

  1. ಉತ್ಪಾದಕತೆ ಹೆಚ್ಚಳ: ಸುಧಾರಿತ ತಂತ್ರಜ್ಞಾನಗಳನ್ನು ಬಳಸಿ ಹೈನುರಾಸುಗಳ ಹಾಲು ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವುದು.
  2. ತಳಿ ಸುಧಾರಣೆ: ತಳೀಯವಾಗಿ ಉತ್ತಮ ಗುಣಮಟ್ಟದ ಹೋರಿಗಳನ್ನು ಸಂತಾನೋತ್ಪತ್ತಿಗೆ ಬಳಸುವುದು.
  3. ಕೃತಕ ಗರ್ಭಧಾರಣೆ ವಿಸ್ತರಣೆ: ರೈತರ ಮನೆ ಬಾಗಿಲಿಗೇ ಗುಣಮಟ್ಟದ ಕೃತಕ ಗರ್ಭಧಾರಣೆ ಸೇವೆಗಳನ್ನು ತಲುಪಿಸುವುದು.
  4. ತಳಿ ಸಂರಕ್ಷಣೆ: ದೇಶೀಯ ಗೋತಳಿಗಳು ಮತ್ತು ಎಮ್ಮೆ ತಳಿಗಳನ್ನು ವೈಜ್ಞಾನಿಕವಾಗಿ ಸಂರಕ್ಷಿಸುವುದು.
  5. ರೈತರ ಸಬಲೀಕರಣ: ಸಣ್ಣ ರೈತರು ಮತ್ತು ಮಹಿಳಾ ಪಶುಪಾಲಕರಿಗೆ ಹೈನುಗಾರಿಕೆಯನ್ನು ಹೆಚ್ಚು ಲಾಭದಾಯಕವಾಗಿಸುವುದು.

 

  • ರಾಷ್ಟ್ರವ್ಯಾಪಿ ಕೃತಕ ಗರ್ಭಧಾರಣೆ ಕಾರ್ಯಕ್ರಮ: ಆಯ್ದ ಜಿಲ್ಲೆಗಳಲ್ಲಿ ರೈತರ ಮನೆ ಬಾಗಿಲಿಗೆ ಉಚಿತವಾಗಿ ಕೃತಕ ಗರ್ಭಧಾರಣೆ ಸೇವೆ. ಇದನ್ನು ‘ಭಾರತ್ ಪಶುಧನ್’ ಆ್ಯಪ್ ಮೂಲಕ ಟ್ರ್ಯಾಕ್ ಮಾಡಲಾಗುತ್ತದೆ.
  • ಲಿಂಗ-ವಿಂಗಡಿತ ವೀರ್ಯ: ಈ ತಂತ್ರಜ್ಞಾನದ ಮೂಲಕ 90% ಕ್ಕಿಂತ ಹೆಚ್ಚು ನಿಖರತೆಯೊಂದಿಗೆ ಹೆಣ್ಣು ಕರುಗಳನ್ನೇ ಪಡೆಯಬಹುದು. ಇದು ಬೀಡಾಡಿ ದನಗಳ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.
  • IVF ತಂತ್ರಜ್ಞಾನ: ಗರ್ಭಧಾರಣೆಯನ್ನು ಖಚಿತಪಡಿಸಿಕೊಳ್ಳಲು ಐವಿಎಫ್ ತಂತ್ರಜ್ಞಾನಕ್ಕೆ ಉತ್ತೇಜನ.
  • ಗೋಕುಲ ಗ್ರಾಮಗಳು: ಸ್ಥಳೀಯ ತಳಿಗಳ ಸಂರಕ್ಷಣೆಗಾಗಿ ಸ್ಥಾಪಿಸಲಾದ ಸಮಗ್ರ ಅಭಿವೃದ್ಧಿ ಕೇಂದ್ರಗಳು.
  • ಡಿಜಿಟಲ್ ಟ್ರೇಸಿಬಿಲಿಟಿ: 34 ಕೋಟಿಗೂ ಹೆಚ್ಚು ಪಶುಗಳನ್ನು ‘ಭಾರತ್ ಪಶುಧನ್’ ಆ್ಯಪ್ ಅಡಿಯಲ್ಲಿ ನೋಂದಾಯಿಸಿ ಅವುಗಳ ಆರೋಗ್ಯ ಮತ್ತು ಸಂತಾನೋತ್ಪತ್ತಿ ಮಾಹಿತಿಯನ್ನು ನಿರ್ವಹಿಸಲಾಗುತ್ತದೆ.
  • ಗೌ ಚಿಪ್ ಮತ್ತು ಮಹಿಷ್ ಚಿಪ್: ಉತ್ತಮ ಗುಣಮಟ್ಟದ ಹೋರಿಗಳನ್ನು ಚಿಕ್ಕ ವಯಸ್ಸಿನಲ್ಲೇ ಗುರುತಿಸಲು ಅಭಿವೃದ್ಧಿಪಡಿಸಲಾದ ಜಿನೋಮಿಕ್ ಚಿಪ್‌ಗಳು.
Share This Article
Leave a Comment

Leave a Reply

Your email address will not be published. Required fields are marked *