ದ್ರಾಕ್ಷಿ ಹಣ್ಣನ್ನು ಬರೀ ನೀರಿನಲ್ಲಿ ಕ್ಲೀನ್ ಮಾಡಿದ್ರೆ ಕೀಟನಾಶಕ ಹೋಗಲ್ಲ, ಈ ಹಣ್ಣನ್ನು ತೊಳೆಯುವ ಸರಿಯಾದ ಹಂತಗಳು ಹೀಗಿವೆ

mail.prabanjas@gmail.com

ಮಾರುಕಟ್ಟೆಯಲ್ಲಿ ಲಭ್ಯವಿರುವ ದ್ರಾಕ್ಷಿಗಳು ತಾಜಾ ಮತ್ತು ಹೊಳೆಯುವಂತೆ ಕಾಣಿಸಬಹುದು, ಆದರೆ ಅವುಗಳ ತೆಳುವಾದ ಮತ್ತು ಸೂಕ್ಷ್ಮವಾದ ಸಿಪ್ಪೆಯು ಕೀಟನಾಶಕಗಳು ಮತ್ತು ಧೂಳಿನ ಕಣಗಳನ್ನು ಸುಲಭವಾಗಿ ಆಕರ್ಷಿಸುತ್ತದೆ ದ್ರಾಕ್ಷಿಗಳು ದಟ್ಟವಾದ ಗೊಂಚಲುಗಳಲ್ಲಿ ಬೆಳೆಯುತ್ತವೆ, ಆದ್ದರಿಂದ ಕೊಳಕು ಮತ್ತು ರಾಸಾಯನಿಕ ಅಂಶಗಳು ಈ ಹಣ್ಣಿನ ಪದರಗಳಲ್ಲಿ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆಗಳು ಹೆಚ್ಚಿರುತ್ತವೆ. ಹೀಗಾಗಿ ಈ ಹಣ್ಣನ್ನು ಕೇವಲ ನಲ್ಲಿ ನೀರಿನಿಂದ ಮಾತ್ರ ತೊಳೆಯದೆ, ಕೆಲವೊಂದು ನೈಸರ್ಗಿಕ ವಿಧಾವನ್ನು ಕೂಡ ಅಳವಡಿಸಿಕೊಳ್ಳಬೇಕಾಗುತ್ತದೆ.

 

ನಿಸರ್ಗದತ್ತವಾಗಿ ಸಿಗುವ ಪ್ರತಿಯೊಂದು ಹಣ್ಣು ಹಾಗೂ ತರಕಾರಿಗಳು ಕೂಡ ಸಂಪೂರ್ಣ ಆಹಾರವೆಂದು ಪರಿಗಣಿಸಲಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ, ಇಂತಹ . ವಿವಿಧ ಬಗೆಯ ವಿಟಮಿನ್ಸ್ ಅಂಶಗಳು, ಖನಿಜಾಂಶಗಳು, ವಿವಿಧ ಆರೋಗ್ಯ ಸಮಸ್ಯೆಗಳ ವಿರುದ್ಧ ಹೋರಾಡಿ, ನಮ್ಮನ್ನು ಆರೋಗ್ಯವಾಗಿರಿಸುವಲ್ಲಿ ನೆರವಿಗೆ ಬರುತ್ತದೆ. ಈಗಂತೂ ಮಾರುಕಟ್ಟೆಯಲ್ಲಿ ಇತರ ಹಣ್ಣುಗಳ ಜೊತೆಗೆ ದ್ರಾಕ್ಷಿ ಹಣ್ಣುಗಳು ರಾಶಿಯೂ ಕೂಡ ಕಾಣಿಸಿಕೊಳ್ಳುತ್ತಿವೆ. ಕೊಂಚ ಹುಳಿ ಹಾಗೂ ಸಿಹಿ ಅನುಭವ ನೀಡುವ ಈ ಹಣ್ಣುಗಳು ಆರೋಗ್ಯಕ್ಕೆ ಕೂಡ ಬಹಳ ಒಳ್ಳೆಯದು ಎನ್ನಲಾಗುತ್ತದೆ.

ಸಾಮಾನ್ಯವಾಗಿ ದ್ರಾಕ್ಷಿ ಹಣ್ಣಿಗೆ ಕೀಟಬಾಧೆ ಜಾಸ್ತಿ ಎನ್ನಲಾಗುತ್ತಿದೆ. ಈ ಹಣ್ಣಿನ ಮೇಲೆ ಕಣ್ಣಿಗೆ ಕಾಣುವ ಕೀಟಗಳು ಮಾತ್ರವಲ್ಲ, ಕೆಲವೊಂದು ಕಣ್ಣಿಗೆ ಕಾಣದಿರುವಷ್ಟು ಸೂಕ್ಷ್ಮ ಬ್ಯಾಕ್ಟೀರಿ ಯಾಗಳು ಈ ಹಣ್ಣಿನ ಮೇಲ್ಮೈ ಕಾಣಿಸಿಕೊಳ್ಳುತ್ತದೆ. ಅಲ್ಲದೆ ಮಾರುಕಟ್ಟೆಯಲ್ಲಿ ಈ ಹಣ್ಣು ಬೇಗನೇ ಹಾಳಾಗಬಾರದು ಎನ್ನುವ ಕಾರಣಕ್ಕೆ ಬಿಳಿಮೇಣದ ಲೇಪನದಂತಿರುವ ರಾಸಾಯನಿಕ ಅಂಶವನ್ನು ಬೆರೆಸಿರುತ್ತಾರೆ.

ಇಂತಹ ದ್ರಾಕ್ಷಿ ಹಣ್ಣನ್ನು ಸರಿಯಾಗಿ ಸ್ವಚ್ಛಗೊಳಿಸದೆ ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ, ಇದರಲ್ಲಿರುವ ವಿಷಕಾರಿ ಅಂಶಗಳು, ಹಾಗೂ ಸೂಕ್ಷ್ಮ ಬ್ಯಾಕ್ಟೀರಿಯಾ ಗಳು, ಹೊಟ್ಟೆಯೊಳಗೆ ಸೇರಬಹುದು. ಹೀಗಾಗಿ ಮಾರುಕಟ್ಟೆಯಲ್ಲಿ ಖರೀದಿಸಿರುವ ದ್ರಾಕ್ಷಿಯನ್ನು ಮನೆಗೆ ತಂದ ಬಳಿಕ, ನೇರವಾಗಿ ರುಚಿ ಹೇಗಿದೆ ಎಂದು ತಿಳಿದುಕೊಳ್ಳುವ ಮೊದಲು ಸರಿಯಾಗಿ ಈ ಹಣ್ಣನ್ನು ಚೆನ್ನಾಗಿ ತೊಳೆಯುವುದು ಬಹಳ ಮುಖ್ಯ.

  • ಸಾಮಾನ್ಯವಾಗಿ ನಾವೆಲ್ಲಾರೂ ಕೂಡ ದ್ರಾಕ್ಷಿ ಹಣ್ಣನ್ನು ಮನೆಗೆ ತಂದ ಬಳಿಕ ಟ್ಯಾಪ್ ನೀರಿನಿಂದ ಚೆನ್ನಾಗಿ ತೊಳೆದು, ನಮಗೆ ಬೇಕಾಗುವಷ್ಟನ್ನು ತೆಗೆದಿಟ್ಟು, ಉಳಿದ ಹಣ್ಣನ್ನು ಹಾಗೆಯೇ ಪಕ್ಕದಲ್ಲಿ ಇಟ್ಟು ಬಿಡುತ್ತೇವೆ.
  • ಆದರೆ ಈ ವಿಧಾನ ಸರಿಯಾದ ಮಾರ್ಗವಲ್ಲ ಎನ್ನುತ್ತಾರೆ ತಜ್ಞರು! ಯಾಕೆಂದ್ರೆ ಇದರ ಮೇಲ್ಮೈ ಇರುವ ಕೀಟನಾಶಕಗಳು ಅಷ್ಟು ಸುಲಭವಾಗಿ ಬಿಟ್ಟು ಹೋಗುವುದಿಲ್ಲ! ಇದಕ್ಕಾಗಿ ನೀವು ಕೆಲವೊಂದು ನೀವು ಕೆಲವು ಹಂತಗಳನ್ನು ಅನುಸರಿಸಬೇಕಾಗುತ್ತದೆ.
  • ಕೃಷಿ ಮತ್ತು ಪರಿಸರ ಸಮಸ್ಯೆಗಳ ಕುರಿತು ಮಾಹಿತಿಯನ್ನು ಒದಗಿಸುವ ಸಂಸ್ಥೆಯಾದ ಎನ್ವಿರಾನ್ಮೆಂಟಲ್ ವರ್ಕಿಂಗ್ ಗ್ರೂಪ್, 2025 ರಲ್ಲಿ ಅತ್ಯಂತ ಕೆಟ್ಟ ಹಣ್ಣುಗಳ ಪಟ್ಟಿಯಲ್ಲಿ ಇದನ್ನು ನಾಲ್ಕನೇ ಸ್ಥಾನದಲ್ಲಿರಿಸಿದೆ.
  • ವಾಸ್ತವವಾಗಿ, ಈ ಹಣ್ಣಿನ ಕೃಷಿಯ ಸಮಯದಲ್ಲಿ ಹೆಚ್ಚು ಕೀಟನಾಶಕ ಗಳನ್ನು ಸಿಂಪಡಿಸುವ ಹಣ್ಣುಗಳಲ್ಲಿ ದ್ರಾಕ್ಷಿಯೂ ಸೇರಿದೆ.
  • ಈ ಸಮಯದಲ್ಲಿ ಕೀಟಗಳು, ಮತ್ತು ಶಿಲೀಂಧ್ರದಿಂದ ರಕ್ಷಿಸಲು ಬೆಳೆ ಯನ್ನು ರಕ್ಷಿಸಲು ಅನೇಕ ಬಗೆಯ ರಾಸಾಯನಿಕ ಅಂಶಗಳನ್ನು ಒಳ ಗೊಂಡಿರುವ ಔಷಧಿಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ.
  • ಸಾಮಾನ್ಯವಾಗಿ ದ್ರಾಕ್ಷಿ ಹಣ್ಣು ಗೊಂಚಲು ಗೊಂಚಲು ಆಗಿ ಬೆಳೆಯು ವುದರಿಂದ, ಈ ಸಮಯದಲ್ಲಿ ಸಂಪಡಿಸಿರುವ ರಾಸಾಯನಿಕ ಅಂಶಗಳು, ಈ ಹಣ್ಣುಗಳಿಗೆ ಅಂಟಿಕೊಳ್ಳುವ ಸಾಧ್ಯತೆಗಳು ಹೆಚ್ಚಿರುತ್ತವೆ!

ಆರೋಗ್ಯ ಮಾಹಿತಿ ವೆಬ್‌ಸೈಟ್ ಎಕಾನ್ಯೂಜೆನಿಕ್ಸ್ ಪ್ರಕಾರ, ದ್ರಾಕ್ಷಿಯನ್ನು ಸ್ವಚ್ಛಗೊಳಿಸುವುದು ಯಾವಾಗಲೂ ರಭಸವಾಗಿ ಹರಿಯುವ ನಲ್ಲಿ ತಣ್ಣೀರಿ ನಿಂದ ಪ್ರಾರಂಭಿಸಬೇಕು.

ದ್ರಾಕ್ಷಿಯನ್ನು ದೊಡ್ಡ ಬೌಲ್ ನಲ್ಲಿ ಅಥವಾ ಜರಡಿಯಲ್ಲಿ ಇರಿಸಿ ಮತ್ತು ಹರಿಯುವ ನೀರಿನ ಅಡಿಯಲ್ಲಿ 20 ರಿಂದ 30 ಸೆಕೆಂಡುಗಳ ಕಾಲ ತೊಳೆಯಿರಿ, ನಂತರ ಉಳಿದಿರುವ ಧೂಳು, ಕೊಳಕು ಮತ್ತು ಕೆಲವು ಮೇಲ್ಮೈ ರಾಸಾಯನಿಕ ಗಳನ್ನು ತೆಗೆದುಹಾಕಲು ನಿಮ್ಮ ಕೈಗಳಿಂದ ನಿಧಾನವಾಗಿ ಉಜ್ಜಿಕೊಳ್ಳಿ.

ಇದು ಮಾತ್ರ ಎಲ್ಲಾ ಕೀಟನಾಶಕಗಳನ್ನು ತೆಗೆದುಹಾಕುವುದಿಲ್ಲವಾದರೂ, ಇದು ಕೊಳೆಯ ಮಟ್ಟವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಮತ್ತು ಮತ್ತಷ್ಟು ಸ್ವಚ್ಛಗೊಳಿಸಲು ಅಡಿಪಾಯ ಹಾಕುತ್ತದೆ.

Share This Article
Leave a Comment

Leave a Reply

Your email address will not be published. Required fields are marked *