Australian Open 2026- ಮೂರು ಗ್ರಾನ್ ಸ್ಲಾಂಗಳಲ್ಲಿ ಸೆಂಚುರಿ! ನೂತನ ಸಾಧನೆ ಶಿಖರವೇರಿ ನಿಂತ ನೊವಾಕ್ ಜೊಕೊವಿಚ್!

mail.prabanjas@gmail.com

Novak Djokovic New World Record- ನೋವಾಕ್ ಜೊಕೊವಿಚ್ ಅವರು 2026ರ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಮೊದಲ ಸುತ್ತಿನಲ್ಲಿ ಸ್ಪೇನ್ ನ ಪೆಡ್ರೊ ಮಾರ್ಟಿನೆಜ್ ಅವರ ವಿರುದ್ಧ ಹೊಸ ವಿಶ್ವದಾಖಲೆ ಬರೆದಿದ್ದಾರೆ. ಈ ಮೂಲಕ 3 ಗ್ರಾನ್ ಸ್ಲಾಮ್‌ಗಳಲ್ಲಿ ನೂರಕ್ಕಿಂತ ಹೆಚ್ಚು ಪಂದ್ಯ ಗೆದ್ದ ಸಾಧನೆ ಮಾಡಿದ್ದಾರೆ. ಈ ಮೊದಲು ವಿಂಬಲ್ಡನ್ ಮತ್ತು ಫ್ರೆಂಚ್ ಓಪನ್ ನಲ್ಲಿ ಈ ಸಾಧನೆ ಮೆರೆದಿದ್ದರು. ಅವರು ಇದೀಗ 400 ಗ್ರ್ಯಾಂಡ್ ಸ್ಲಾಮ್ ಗೆಲುವುಗಳ ಗಡಿ ದಾಟುವ ಸನಿಹದಲ್ಲಿದ್ದಾರೆ.

ಹೈಲೈಟ್ಸ್‌:

  • ಆಸ್ಡ್ರೇಲಿಯನ್ ಓಪನ್ ನ ಮೊದಲ ಸುತ್ತಿನಲ್ಲಿ ನೊವಾಕ್ ಜೊಕೊವಿಚ್ ಗೆ ಗೆಲುವು
  • ಸ್ಪೇನ್‌ನ ಪೆಡ್ರೊ ಮಾರ್ಟಿನೆಜ್ ಅವರನ್ನು 6-3, 6-2, 6-2 ನೇರಸೆಟ್ ಗಳಜಯ
  • 3 ಗ್ರಾನ್ ಸ್ಲಾಂಗಳಲ್ಲಿ 100 ಗೆಲುವು ಸಾಧಿಸಿದ ವಿಶ್ವದಾಖಲೆ ಬರೆದ ನೊವಾಕ್

ಸರ್ಬಿಯಾದ ಟೆನಿಸ್ ದಂತಕತೆ ನೋವಾಕ್ ಜೊಕೊವಿಚ್ ಅವರು 2026ರ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಮೊದಲ ಸುತ್ತಿನಲ್ಲಿ ಗೆಲ್ಲುವ ಮೂಲಕ ತಮ್ಮ ಹೆಸರಿಗೆ ಮತ್ತೊಂದು ವಿಶ್ವದಾಖಲೆಯನ್ನು ಬರೆದುಕೊಂಡಿದ್ದಾರೆ. ಸ್ಪೇನ್‌ನ ಪೆಡ್ರೊ ಮಾರ್ಟಿನೆಜ್ ಅವರನ್ನು 6-3, 6-2, 6-2 ನೇರ ಸೆಟ್‌ಗಳಲ್ಲಿ ಸೋಲಿಸುವ ಮೂಲಕ ಮೂರು ಗ್ರಾನ್ ಸ್ಲಾಂಗಳಲ್ಲಿ ನೂರಕ್ಕಿಂತದಲೂ ಹೆಚ್ಚು ಪಂದ್ಯ ಗೆದ್ದ ಸಾಧನೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ 2 ಗ್ರಾನ್ ಸ್ಲಾಂಗಳಲ್ಲಿ ನೂರಕ್ಕಿಂತ ಹೆಚ್ಚು ಪಂದ್ಯಗಳನ್ನು ಗೆದ್ದಿರುವ ರೋಜರ್ ಫೆಡರರ್ ಇದೀಗ 2ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಒಂದು ಗ್ರಾನ್ ಸ್ಲಾಂ ನಲ್ಲಿ ಈ ಸಾಧನೆ ಮಾಡಿರುವ ರಾಫೆಲ್ ನಡಾಲ್ ಅವರು 3ನೇ ಸ್ಥಾನದಲ್ಲಿದ್ದಾರೆ.

ಮೆಲ್ಬರ್ನ್ ಪಾರ್ಕ್ ನಲ್ಲಿ ಸೋಮವಾರ ನೊವಾಕ್ ಜೊಕೊವಿಚ್ ಮತ್ತು ಪೆಡ್ರೊ ಮಾರ್ಟಿನೆಜ್ ಪಂದ್ಯ 1 ಗಂಟೆ 55 ನಿಮಿಷಗಳಲ್ಲಿ ಮುಕ್ತಾಯವಾಯಿತು. ಇದು ಆಸ್ಟ್ರೇಲಿಯನ್ ಓಪನ್ ನಲ್ಲಿ ಅವರ 100ನೇ ಗೆಲುವಾಗಿ ದಾಖಲಾಯಿತು. ಅವರು ಇದೀಗ ತಮ್ಮ 398ನೇ ಗ್ರ್ಯಾಂಡ್ ಸ್ಲಾಮ್ ಗೆಲುವನ್ನು ದಾಖಲಿಸಿದ್ದಾರೆ. ಇದರೊಂದಿಗೆ  ನಾಗುವ ಸನಿಹದಲ್ಲಿದ್ದು. ಈ ವಾರಾಂತ್ಯದಲ್ಲಿಯೇ ಈ ಸಾಧನೆ ಮಾಡುವ ನಿರೀಕ್ಷೆ ಇದೆ.

ಆತ್ಮವಿಶ್ವಾಸ ಹೆಚ್ಚಿಸಿದ ಗೆಲುವು

ಮೆಲ್ಬೋರ್ನ್ ಪಾರ್ಕ್‌ನಲ್ಲಿ ತಮ್ಮ 11ನೇ ಪ್ರಶಸ್ತಿಯನ್ನು ಎದುರು ನೋಡುತ್ತಿರುವ  ಅವರಿಗೆ ಈ ಗೆಲುವು ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಗ್ರಾನ್ ಸ್ಲಾಂನಲ್ಲಿ ಅವರು ಇದುವರೆಗೆ 10 ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಇಷ್ಟು ಗೆದ್ದ ಮತ್ತೊಬ್ಬ ಟೆನಿಸಿಗ ಇಲ್ಲ. ಅಲ್ಲದೆ ಒಟ್ಟಾರೆಯಾಗಿ 24 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದು ಇತಿಹಾಸದಲ್ಲಿಯೇ ಅತಿ ಹೆಚ್ಚು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದ ಆಟಗಾರ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ. ಎರಡು ವರ್ಷಗಳಿಂದ ಪ್ರಶಸ್ತಿ ಬರ ಅನುಭವಿಸುತ್ತಿರುವ ಅವರು 25ನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆಲ್ಲುವ ಉತ್ಸಾಹದಲ್ಲಿದ್ದಾರೆ.

ಜೊಕೊವಿಚ್ ಅವರು ಆಸ್ಟ್ರೇಲಿಯನ್ ಓಪನ್‌ನಲ್ಲಿ ಅತಿ ಹೆಚ್ಚು ಬಾರಿ ಭಾಗವಹಿಸಿದ ಆಟಗಾರರ ಪಟ್ಟಿಯಲ್ಲಿ ರೋಜರ್ ಫೆಡರರ್ ಅವರೊಂದಿಗೆ (21 ಬಾರಿ) ಸಮಬಲ ಸಾಧಿಸಿದ್ದಾರೆ. ಗ್ರ್ಯಾಂಡ್ ಸ್ಲಾಮ್‌ಗಳಲ್ಲಿ ಅತಿ ಹೆಚ್ಚು ಬಾರಿ ಭಾಗವಹಿಸಿದ ಆಟಗಾರರ ಪಟ್ಟಿಯಲ್ಲಿಯೂ ರೋಜರ್ ಫೆಡರರ್ ಮತ್ತು ಫೆಲಿಸಿಯಾನೊ ಲೋಪೆಝ್ ಅವರೊಂದಿಗೆ (81 ಬಾರಿ) ಸಮನಾಗಿದ್ದಾರೆ. ಪ್ರಸ್ತುತ, ಜೊಕೊವಿಚ್ ಅವರು ಗ್ರ್ಯಾಂಡ್ ಸ್ಲಾಮ್‌ಗಳ ಮೊದಲ ಸುತ್ತು, ಎರಡನೇ ಸುತ್ತು, ಮೂರನೇ ಸುತ್ತು, ನಾಲ್ಕನೇ ಸುತ್ತು, ಕ್ವಾರ್ಟರ್-ಫೈನಲ್, ಸೆಮಿ-ಫೈನಲ್ ಮತ್ತು ಫೈನಲ್ ತಲುಪಿದ ಪುರುಷ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *