ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಗ್ರಹಣ; ಕಾಮಗಾರಿ ವಿಳಂಬಕ್ಕೆ ಯಾರು ಹೊಣೆ? ರೈಲು ಸಂಪರ್ಕದ ಕನಸು ನನಸಾಗಲಿ

mail.prabanjas@gmail.com
ರೈಲು ಸಂಪರ್ಕ ಯಾವುದೇ ರಾಜ್ಯದ ಅಭಿವೃದ್ಧಿಗೆ ಪ್ರಾಥಮಿಕ ಅಂಶ. ಸದೃಢ ರೈಲು ಜಾಲ ಹೊಂದಿರುವ ರಾಜ್ಯಗಳಲ್ಲಿ ಅಭಿವೃದ್ಧಿಯ ವೇಗವೂ ಹೆಚ್ಚಿರುತ್ತದೆ. ಆದರೆ ಕರ್ನಾಟಕದಲ್ಲಿ ರೈಲವೆ ಯೋಜನೆಗಳ ಅನುಷ್ಠಾನ ವಿಳಂಬವಾಗುತ್ತಿದ್ದು, ಇದು ಅಭಿವೃದ್ಧಿಯನ್ನೂ ಕುಂಠಿತಗೊಳಿಸುತ್ತಿದೆ. ಅನುದಾನ ಬಿಡುಗಡೆ ಮಾಡುವಲ್ಲಿ ರಾಜ್ಯ ಸರ್ಕಾರದ ವಿಳಂಬ ನೀತಿ, ಕಾಮಗಾರಿಗೆ ವೇಗ ನೀಡದ ರೈಲ್ವೆ ಇಲಾಖೆ ಮುಂತಾದ ಅನೇಕ ಕಾರಣಗಳಿಂದ ಮಹತ್ವಾಕಾಂಕ್ಷಿ ಯೋಜನೆಗಳು ಇನ್ನೂ ಅನುಷ್ಠಾನದ ಹಂತದಲ್ಲೇ ಇದೆ. ಈ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.

ಹೈಲೈಟ್ಸ್‌:

  • ಕರ್ನಾಟಕದ ಮಹತ್ವಾಕಾಂಕ್ಷಿ ರೈಲ್ವೆ ಯೋಜನೆಗಳಿಗೆ ನೀಡಬೇಕಿದೆ ವೇಗ.
  • ರಾಜ್ಯದಲ್ಲಿ ಬಾಕಿ ಉಳಿದಿರುವ ರೈಲ್ವೆ ಯೋಜನೆಗಳ ಸಂಖ್ಯೆ ಎಷ್ಟು ಗೊತ್ತಾ?
  • ರೈಲ್ವೆ ಇಲಾಖೆ ಬೇಡಿಕೆಗಿಂತಲೂ ದುಪ್ಪಟ್ಟು ಪ್ರಮಾಣದ ಭೂಸ್ವಾಧೀನ ಏಕೆ?

ಹುಬ್ಬಳ್ಳಿ: ಒಂದೆಡೆ ಭೂ ಸ್ವಾಧೀನದ ಪರಿಹಾರ ಹಾಗೂ ತನ್ನ ಪಾಲಿನ ವಂತಿಗೆ ಕೊಡದ ರಾಜ್ಯ ಸರ್ಕಾರ, ಇನ್ನೊಂದೆಡೆ ಅನುದಾನ ನೀಡಿದರೂ ಕಾಮಗಾರಿಗೆ ವೇಗ ನೀಡದ ರೈಲ್ವೆ ಇಲಾಖೆ. ಹಾಗಾಗಿ ರಾಜ್ಯದ ರೈಲ್ವೆ ಯೋಜನೆಗಳು ವಿಳಂಬವಾಗುತ್ತಿದ್ದು, ಯೋಜನಾ ವೆಚ್ಚದ ಗಾತ್ರ ಮಾತ್ರ ವರ್ಷದಿಂದ ವರ್ಷಕ್ಕೆ ಹಿಗ್ಗುತ್ತಲೇ ಇದೆ. ಈ ಬಾರಿಯ  ನೀಡಲಾಗಿದೆ.

ಪರಿಣಾಮ ರಾಜ್ಯದ ಮಹತ್ವಾಕಾಂಕ್ಷಿ ರೈಲ್ವೆ ಯೋಜನೆಗಳ ಅನುಷ್ಠಾನದ ಕನಸು ಇನ್ನೂ ಕನಸಾಗಿಯೇ ಉಳಿದಿದೆ. ನೈಋುತ್ಯ ವಲಯ 3,692 ಕಿ.ಮೀ ರೈಲ್ವೆ ಜಾಲ ವ್ಯಾಪ್ತಿ ಹೊಂದಿದ್ದು ಅಭಿವೃದ್ಧಿಯ ಒತ್ತಾಸೆಯಾಗಿ ರಾಜ್ಯವು ಉಚಿತ ಭೂಮಿ ಕೊಡುವುದರ ಜೊತೆಗೆ ಒಟ್ಟು ವೆಚ್ಚದ ಶೇ.50ರಷ್ಟು ಪಾಲನ್ನು ಕೊಡುವ ವಾಗ್ದಾನದೊಂದಿಗೆ ಯೋಜನೆಗಳನ್ನು ಅಳವಡಿಸಿಕೊಂಡಿದೆ.

ಇದಕ್ಕೆ ಪೂರಕವಾಗಿ ಭೂಮಿ ಮತ್ತು ತನ್ನ ಪಾಲನ್ನು ಸಕಾಲಿಕವಾಗಿ ಪೂರೈಸುವಲ್ಲಿ ಕೊಂಚ ಹಿಂದೆ ಬಿದ್ದಿದೆ. ಪ್ರಸಕ್ತ ಬಜೆಟ್‌ನಲ್ಲಿ ಹಣ ಮೀಸಲಿಡುವ ಮೂಲಕ ರೈಲ್ವೆ ಯೋಜನೆಗಳು ವೇಗ ಪಡೆಯುವತ್ತ ಗಮನ ಹರಿಸಬೇಕೆಂಬ ಒತ್ತಾಸೆ ಜನರದ್ದಾಗಿದೆ. ಹೊಸ ಹಾಗೂ ಜೋಡಿ ಮಾರ್ಗ ಸೇರಿ ರಾಜ್ಯದಲ್ಲಿ 25 ರೈಲ್ವೆ ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ.

ಈ ಯೋಜನೆಗಳ ಒಟ್ಟು ಉದ್ದ 3,264 ಕಿ.ಮೀ. ಈ ತನಕ 1,394 ಕಿ.ಮೀ ಮಾತ್ರ ಪೂರ್ಣಗೊಂಡಿದೆ. ಭೂಸ್ವಾಧೀನ ಪ್ರಕ್ರಿಯೆ ವಿಳಂಬದಿಂದ ಯೋಜನೆಗಳ ಅನುಷ್ಠಾನ ತಡವಾಗಿದೆ. ಒಟ್ಟಾರೆ ಶೇ.37ರಷ್ಟು ಜಮೀನು ಸ್ವಾಧೀನಪಡಿಸಿಕೊಳ್ಳಬೇಕಿದೆ. ಸಮಪಾಲು ಭರಿಸುವ ವ್ಯವಸ್ಥೆಯಡಿ 12,147 ಕೋಟಿ ರೂ. ಮೊತ್ತದ 9 ರೈಲ್ವೆ ಯೋಜನೆಗಳು ಪ್ರಗತಿಯಲ್ಲಿವೆ.

ಆಮೆ ವೇಗದಲ್ಲಿ ಕೆಲಸ:

ಇದರ ಯೋಜನಾ ವೆಚ್ಚವು 927 ಕೋಟಿ ರೂ.ಗಳಿಂದ 2345 ಕೋಟಿ ರೂ.ಗೆ ಏರಿಕೆಯಾಗಿದೆ. ಇತರ ಯೋಜನೆಗಳ ಸ್ಥಿತಿಯೂ ಭಿನ್ನವಾಗಿಲ್ಲ. ಭೂ ಸ್ವಾಧೀನ ಪ್ರಕ್ರಿಯೆಯಲ್ಲಿಉಂಟಾಗುವ ಸಂಭಾವ್ಯ ತೊಂದರೆಗಳ ಹಿನ್ನೆಲೆಯಲ್ಲಿ ರೈಲ್ವೆಯು ಶೇ.90ರಷ್ಟು ಭೂಮಿ ಹಸ್ತಾಂತರಿಸುವ ಯೋಜನೆಗಳ ಭೌತಿಕ ಕಾಮಗಾರಿ ಆರಂಭಿಸುವ ನೀತಿ ಅಳವಡಿಸಿಕೊಂಡಿದೆ.

ಶೇ 93-98ರಷ್ಟು ಭೂಮಿ ಹಸ್ತಾಂತರಿಸಿದರೂ ಕಾಮಗಾರಿ ಮಾತ್ರ ಆಮೆವೇಗ. 257 ಕಿ.ಮೀ. ಗದಗ-ವಾಡಿ, 143 ಕಿ.ಮೀ ಬಾಗಲಕೋಟ-ಕುಡಚಿ, ಗಿಣಿಗೇರಾಧಿ-ರಾಯಚೂರು, ರಾಯದುರ್ಗ-ಕಲ್ಯಾಣದುರ್ಗ-ತುಮಕೂರು ಯೋಜನೆಗಳಲ್ಲಿಸರಾಸರಿ ಶೇ. 97ರಷ್ಟು ಭೂಮಿ ಹಸ್ತಾಂತರಗೊಂಡಿದೆ.

ಆದರೆ ಗದಗ-ವಾಡಿ ಶೇ.29, ಬಾಗಲಕೋಟೆ-ಕುಡಚಿ, ರಾಯದುರ್ಗ -ತುಮಕೂರು ಶೇ.16, ಗಿಣಿಗೇರಾ ರಾಯಚೂರು-66, ಕುಡಚಿ-ಬಾಗಲಕೋಟೆ ಯೋಜನೆಗಳಲ್ಲಿ ಶೇ.38ರಷ್ಟು ಮಾತ್ರ ಕೆಲಸ ಆಗಿದೆ. ಇತ್ತೀಚಿಗೆ ರೈಲ್ವೆ ಇಲಾಖೆ  ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *