T20 World Cup- ಹಳಿ ತಪ್ಪಿದ್ದ ಭಾರತಕ್ಕೆ ಆಸರೆಯಾದ ಶಿವಂ ದುಬೆ ಆಲ್ರೌಂಡ್ ಆಟ: ಮನಗೆದ್ದ ನೆದರ್ಲೆಂಡ್ ಹೋರಾಟ

mail.prabanjas@gmail.com
India Vs Netherlands- ವೆದರ್ಲೆಂಡ್ ತಂಡವನ್ನು 17 ರನ್ ಗಳಿಂದ ಪರಾಭವಗೊಳಿಸಿದ ಹಾಲಿ ಚಾಂಪಿಯನ್ ಭಾರತ ತಂಡ ಆಡಿದ ನಾಲ್ಕೂ ಪಂದ್ಯಗಳನ್ನು ಗೆದ್ದು ಎ ಬಣದಿಂದ ಅಜೇಯವಾಗಿ ಸೂಪರ್ 8 ಹಂತಕ್ಕೇರಿದೆ. ಭಾರತದ ತಂಡದ ಉನ್ನತ ಬ್ಯಾಟಿಂಗ್ ಕ್ರಮಾಂಕ ಕೈಕೊಟ್ಟ ಸಂದರ್ಭ ಆಸರೆಯಾಗಿದ್ದಲ್ಲದೆ ಅರ್ಧಶತಕ ಹೊಡೆದ ಶಿವಂ ದುಬೆ ಬಳಿಕ 2 ವಿಕೆಟ್ ಕಿತ್ತು ತಂಡದ ಗೆಲುವಿನ ರೂವಾರಿಯಾದರು. ಅರ್ಹವಾಗಿ ಅವರಿಗೆ ಪಂದ್ಯಶ್ರೇ,ಷ್ಠ ಪ್ರಶಸ್ತಿ ದೊರಕಿತು. ಭಾರತ ಸೂಪರ್ 8 ಹಂತದ ಮೊದಲ ಪಂದ್ಯವನ್ನು ಫೆಬ್ರವರಿ 22ರಂದು ದಕ್ಷಿಣ ಆಫ್ರಿಕಾ ವಿರುದ್ಧ ಆಢಲಿದೆ.
  • ಅಂತಿಮ ಲೀಗ್ ಪಂದ್ಯದಲ್ಲಿ ನೆದರ್ಲೆಂಡ್ ವಿರುದ್ಧ ಭಾರತಕ್ಕೆ 17 ರನ್ ಜಯ
  • ಎ ಬಣದಿಂದ ಅಜೇಯವಾಗಿ ಸೂಪರ್ 8 ಹಂತ ಪ್ರವೇಶಿಸಿದ ಟೀಂ ಇಂಡಿಯಾ
  • ಆಲ್ರೌಂಡ್ ಪ್ರದರ್ಶನ ನೀಡಿದ ಶಿವಂ ದುಬೆಗೆ ಪಂದ್ಯಶ್ರೇಷ್ಠ ಪುರಸ್ಕಾರ

ಶಿವಂ ದುಬೆ ಅವರ ಆಲ್ರೌಂಡ್ ಆಟದ ನೆರವಿನಿಂದ ಐಸಿಸಿ ಟಿ20 ವಿಶ್ವಕಪ್ 2026ರ ಗುಂಪು ಹಂತದ ಕೊನೇ ಪಂದ್ಯದಲ್ಲಿ ಕ್ರಿಕೆಟ್ ಶಿಶು ನೆದರ್ಲೆಂಡ್ ತಂಡವನ್ನು 17 ರನ್ ಅಂತರದಿಂದ ಸೋಲಿಸಿದ ಭಾರತ ಎ ಬಣದಲ್ಲಿ ಅಜೇಯವಾಗಿ ಮೊದಲನೇ ಸ್ಥಾನಿಯಾಗಿ ಸೂಪರ್ 8 ಪ್ರವೇಶಿಸಿದೆ. ಆಡಿದ 4 ಪಂದ್ಯಗಳಲ್ಲಿ ಒಂದು ಗೆಲುವಿನ ಸವಿಯೊಂದಿಗೆ ನೆದರ್ಲೆಂಡ್ ತಂಡ ಈ ವಿಶ್ವಕಪ್ ಅಭಿಯಾನವನ್ನು ಮುಗಿಸಿದೆ.

Share This Article
Leave a Comment

Leave a Reply

Your email address will not be published. Required fields are marked *