ಓಪನ್‌ಎಐ ಇತ್ತೀಚೆಗೆ ಜಿಪಿಟಿ 4ಒ ಅಪ್‌ಡೇಟ್ ಬಿಡುಗಡೆ ಮಾಡಿದಾಗಿನಿಂದ ಸೋಷಿಯಲ್ ಮೀಡಿಯಾ ವೇದಿಕೆಗಳಾದ ಇನ್‌ಸ್ಟಗ್ರಾಮ್ ಮತ್ತು ಎಕ್ಸ್ ಸೇರಿದಂತೆ ಹಲವು ಘಿಬ್ಲಿ ಶೈಲಿಯ ಚಿತ್ರಗಳಿಂದ ತುಂಬಿ ತುಳುಕುತ್ತಿವೆ. ಈ ವೈರಲ್ ಪ್ರವೃತ್ತಿಯು ಅನಿಮೇಷನ್ ಪ್ರೇರಿತ ಸ್ಪರ್ಶದೊಂದಿಗೆ ಜನಪ್ರಿಯ ಮೀಮ್‌ಗಳು ಮತ್ತು ಫೋಟೋಗಳನ್ನು ಮರುಕಲ್ಪನೆ ಮಾಡುವ ಬಗ್ಗೆ ಆಗಿದೆ. ಟ್ರೆಂಡ್‌ನ ಕೇಂದ್ರಬಿಂದುವೆಂದರೆ ಚಾಟ್‌ಜಿಪಿಟಿಯ ಇತ್ತೀಚಿನ ಎಐ ಇಮೇಜ್ ಜನರೇಟರ್ ಸಹಾಯದಿಂದ ರಚಿಸಲಾದ ಚಿತ್ರಗಳೇ. ಎಐ ರಚಿತ ಕಲಾಕೃತಿಯು ಸ್ಟುಡಿಯೋ ಘಿಬ್ಲಿಯ ಸಿಗ್ನೇಚರ್ ಸೌಂದರ್ಯದಿಂದ ನಿರೂಪಿಸಲ್ಪಟ್ಟಿದೆ. ಆದಾಗ್ಯೂ ವರದಿಗಳ ಪ್ರಕಾರ, ಚಾಟ್ ಜಿಪಿಟಿ ಪ್ಲಸ್, ಟೀಮ್ ಮತ್ತು ಪ್ರೊ ಅನ್ನು ಬಳಸುವವರಿಗೆ ಚಾಟ್ ಜಿಪಿಟಿ ನಲ್ಲೂ ಈ ವೈಶಿಷ್ಟ್ಯಗಳು ಲಭ್ಯವಿದೆ ಎನ್ನಲಾಗಿದೆ.
ಆದ್ರೆ ಒಮ್ಮೆ ನಾವೆಲ್ಲ ಈ ಚಿತ್ರಗಳನ್ನು ಸೂಕ್ಷ್ಮವಾಗಿ ನೋಡಿದರೆ ಬಹುಶಃ ಬಹುಸಂಖ್ಯಾತ 80, 90 ಕಿಡ್‌ಗಳಿಗೆ ತಮ್ಮೂರಿನ, ಹಳ್ಳಿಗಳಲ್ಲಿ ಅಂದು ನಡೆಸುತ್ತಿದ್ದ ಗೊಂಬೆ ಆಟಗಳು, ತೊಗಲುಬೊಂಬೆ ಆಟಗಳು ನೆನಪಿಗೆ ಬರಬಹುದು. ಅಂತಹ ಚಿತ್ರಗಳನ್ನು ಈ ಘಿಬ್ಲಿಯಲ್ಲಿ ಸಹ ನೋಡಬಹುದು. ಹಿಂದಿನ ಕಾಲದ ಸ್ಟೋರಿಗಳನ್ನು ಸುಲಭವಾಗಿ ಚಿತ್ರಿಸಲು ಈವರೆಗೆ ಸಿನಿಮಾ ಎಡಿಟರ್‌ಗಳಿಗೆ ಸಾಧ್ಯವಾಗುತ್ತಿತ್ತು, ಚಿತ್ರಕಲಾಕಾರರಿಗೆ ಸಾಧ್ಯವಾಗುತ್ತಿತ್ತು. ಆದರೆ ಚಾಟ್‌ಜಿಪಿಟಿ ಹೊಸ ಫೀಚರ್‌ನಿಂದ ಈಗ ಸುಲಭವಾಗಿ ಯಾರು ಬೇಕಾದರೂ ಇಂತಹ ಚಿತ್ರಗಳನ್ನು ಕ್ಷಣದಲ್ಲಿ ರಚಿಸಬಹುದಾಗಿದೆ.
- ಚಾಟ್‌ಜಿಪಿಟಿ ವೆಬ್‌ಪೇಜ್ https://chatgpt.com/ ಗೆ ಭೇಟಿ ನೀಡಿ.
- ಓಪನ್ ಆದ ಪೇಜ್‌ನಲ್ಲಿ ‘ವಾಟ್ ಕೆನ್ ಐ ಹೆಲ್ಪ್ ವಿತ್?’ ಎಂದಿರುವಲ್ಲಿ ಗಮನಿಸಿ.
- 3 ಡಾಟ್ ಇರುವಲ್ಲಿ ಕ್ಲಿಕ್ ಮಾಡಿ.
- ನಂತರ ನಿಮಗೆ Image, Canvas ಎಂಬ ಎರಡು ಆಯ್ಕೆಗಳು ಪ್ರದರ್ಶಿತವಾಗುತ್ತವೆ.
- ನೀವು ಇಮೇಜ್ ಟು ಇಮೇಜ್ ಅನ್ನು ಘಿಬ್ಲಿ ಶೈಲಿಗೆ ಪರಿವರ್ತಿಸಲು, ‘Image’ ಆಯ್ಕೆ ಮಾಡಿ, ನಂತರ ಫೋಟೋ ಅಪ್‌ಲೋಡ್ ಮಾಡಿ,
- ನಂತರ ‘convert it to ghibli style
- ‘ ಎಂದು ಬರೆಯಿರಿ.
- ನಂತರ ನಿಮ್ಮ ಫೋಟೋ ಘಿಬ್ಲಿ ಶೈಲಿಯಲ್ಲಿ ಪ್ರದರ್ಶಿತವಾಗುತ್ತದೆ.

