ಗಂಡ ಹೆಂಡತಿ ನಡುವಿನ ಬಿರುಕು ಹೇಗೆ ಪರಿಹರಿಸುವುದು? ಈ ಬಗ್ಗೆ ಸ್ವಾಮಿ ಪ್ರೇಮಾನಂದ ಮಹರಾಜ್ ಅವರ ಸಲಹೆಗಳೇನು?

mail.prabanjas@gmail.com

ಪ್ರೇಮಾನಂದ್ ಜೀ ಮಹಾರಾಜ್ ಅವರನ್ನು ಭಾರತದಲ್ಲಿ ಮಾತ್ರವಲ್ಲದೆ ಜಾಗತಿಕವಾಗಿಯೂ ಪ್ರೀತಿಸಲಾಗುತ್ತದೆ. ಪ್ರೇಮಾನಂದ್ ಜೀ ಮಹಾರಾಜ್ ಅವರ ಅನೇಕ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತವೆ, ಜನರನ್ನು ಸರಿಯಾದ ದಿಕ್ಕಿನಲ್ಲಿ ಸಾಗುವ ರೀತಿಯಲ್ಲಿ ಸರಿಯಾದ ಮಾರ್ಗದರ್ಶನವನ್ನು ನೀಡುತ್ತಾ ಬರುತ್ತಿದ್ದಾರೆ.

ವೃಂದಾವನದ ಪೂಜ್ಯ ಸ್ವಾಮಿ ಪ್ರೇಮಾನಂದ ಮಹಾರಾಜ್ ಅವರು ಪ್ರಸಿದ್ಧ ಸಂತ ಮತ್ತು ರಾಧಾಕೃಷ್ಣ ಭಕ್ತರು. ಉತ್ತರ ಪ್ರದೇಶದ ಕಾನ್ಪುರದಲ್ಲಿ ಜನಿಸಿದ ಇವರು ತನ್ನ 13ನೇ ವಯಸ್ಸಿ ನಲ್ಲಿ ಮನೆ ತೊರೆದು ಸನ್ಯಾಸತ್ವ ಸ್ವೀಕರಿಸಿದರು ಎಂದು ಹೇಳಲಾಗುತ್ತದೆ. ದೇವರ ಮೇಲೆ ಅಪಾರ ನಂಬಿಕೆಯನ್ನು ಹೊಂದಿರುವ ಇವರು, ತನ್ನ ಸತ್ಸಂಗ ಸಂಗೀತ, ಧ್ಯಾನ ಮತ್ತು ಭಜನಾ ಮಾರ್ಗದ ಮೂಲಕ ಭಕ್ತರಿಗೆ ಸೂಕ್ತಮಾರ್ಗದರ್ಶನ ನೀಡುತ್ತಾ ಬರುತ್ತಿದ್ದಾರೆ

ಇದರಿಂದಾಗಿ ಇವರು ಕೇವಲ ಭಾರತದಲ್ಲಿ ಮಾತ್ರವಲ್ಲದೆ ಜಾಗತಿಕವಾಗಿಯೂ ಕೂಡ ತುಂಬಾನೇ ಪ್ರಸಿದ್ಧಿಯನ್ನು ಪಡೆದು ಕೊಂಡಿದ್ದಾರೆ. ವಿಶೇಷವಾಗಿ ಸಮಾಜಕ್ಕೆ ಹೇಳಿಕೊಟ್ಟ ನೀತಿಯ ಪ್ರಕಾರವೇ ತಾನೂ ಕೂಡ ಇದೇ ಮಾರ್ಗದಲ್ಲಿ ನಡೆದು ಸಮಾಜಕ್ಕೆ ಮಾದರಿಯಾಗಿ ನಿಂತಿದ್ದಾರೆ. ವಿಶೇಷವಾಗಿ ತನ್ನ ನೈತಿಕ ಮೌಲ್ಯಗಳ ಮೂಲಕವೇ ಎಲ್ಲರಿಗೂ ಕೂಡ ಉತ್ತಮ ದಾರಿದೀಪವಾಗಿದ್ದಾರೆ

ದೂರದೂರದ ಊರುಗಳಿಂದ ಸ್ಥಳಗಳಿಂದ ಜನರು, ಇವರ ಅನುಯಾಯಿಗಳು ಇವರನ್ನು ಭೇಟಿಯಾಗಲು ಇವರ ಪ್ರವಚನ ಅಥವಾ ಸತ್ಸಂಗ ಕೇಳಲು, ದರ್ಶನ ಪಡೆಯಲು ಮತ್ತು ಮನಸಿಗೆ ಶಾಂತಿ ಪಡೆಯಲು, ಹಾಗೂ ಇವರು ನೀಡುವ ಮಾರ್ಗದರ್ಶನಕ್ಕಾಗಿ ಭಕ್ತಿಯಿಂದ ಬರುತ್ತಾರೆ.
ಸಂಸಾರದ ಸುಖ-ದುಃಖಗಳನ್ನು ಮರೆತು ಮನಸ್ಸಿಗೆ ಶಾಂತಿ, ನೆಮ್ಮದಿಗಾಗಿ ಇವ ರನ್ನು ಭೇಟಿ ಆಗಲು ಬರುವ ಭಕ್ತ ಸಾಗರ ಬಹಳಷ್ಟು ದೊಡ್ಡದಿದೆ. ಇತ್ತೀಚೆಗೆ ಪ್ರೇಮಾನಂದ ಮಹಾರಾಜ್ ಅವರು ತಮ್ಮ ಒಂದು ಧರ್ಮೋಪದೇಶದಲ್ಲಿ ಪತಿ-ಪತ್ನಿಯ ನಡುವಿನ ಸಂಬಂಧದ ಬಗ್ಗೆ ಬಹಳ ಮುಖ್ಯವಾದ ವಿಷಯಗಳನ್ನು ಮಾತನಾಡಿದರು.

ಪತಿ-ಪತ್ನಿಯ ನಡುವಿನ ಸಂಬಂಧವು ಬಹಳ ಪವಿತ್ರವಾದುದು ಮತ್ತು ಯಾವುದೇ ಸಂದರ್ಭದಲ್ಲೂ ಅದನ್ನು ಮುರಿಯಬಾರದು ಎಂದು ಅವರು ಸಮಾಜಕ್ಕೆ ಒಂದು ಒಳ್ಳೆಯ ಉಪದೇಶವನ್ನು ನೀಡಿದ್ದಾರೆ. ಆದಾಗ್ಯೂ, ಪತಿ-ಪತ್ನಿ ಯಾವ ಸಂದರ್ಭ ಗಳಲ್ಲಿ ಪರಸ್ಪರ ತ್ಯಜಿಸಬೇಕು ಎಂಬುದನ್ನು ಮಹಾರಾಜ್ ಜಿ ಅವರು ತಮ್ಮ ಮಾತಿನಲ್ಲಿ ವಿವರಿಸಿದ್ದಾರೆ.

ಪ್ರತಿಯೊಂದು ಸಂಬಂಧವು ನಂಬಿಕೆ ಮತ್ತು ತಾಳ್ಮೆಯ ಮೇಲೆ ನಿರ್ಮಿಸಲ್ಪಟ್ಟಿದೆ. ಜೀವನವು ಕೆಲವೊಮ್ಮೆ ಕಷ್ಟಕರ ಸಮಯಗಳನ್ನು ತರಬಹುದು, ಆದರೆ ಅವುಗಳನ್ನು ತಾಳ್ಮೆ ಮತ್ತು ತಿಳುವಳಿಕೆಯಿಂದ ನಿಭಾಯಿಸುವುದು ಮುಖ್ಯ.

ಸ್ವಾಮೀಜಿಯವರ ಪ್ರಕಾರ, ಸಂದೇಹವು ಯಾವುದೇ ಸಂಬಂಧವನ್ನು ದುರ್ಬಲ ಗೊಳಿಸಬಹುದು. ಆದ್ದರಿಂದ, ನಿಮ್ಮ ಸಂಗಾತಿಯ ಮೇಲೆ ಸಂಪೂರ್ಣ ನಂಬಿಕೆ ಯನ್ನು ಹೊಂದಿರಿ ಮತ್ತು ಯಾವುದೇ ನಕಾರಾತ್ಮಕತೆಯನ್ನು ತಪ್ಪಿಸಿ. ತಾಳ್ಮೆ ಮತ್ತು ವಿಶ್ವಾಸವು ನಿಮ್ಮ ಸಂಬಂಧದಲ್ಲಿ ಸ್ಥಿರತೆ ಮತ್ತು ಶಕ್ತಿಯನ್ನು ಖಚಿತ ಪಡಿಸುತ್ತದೆ

 

Share This Article
Leave a Comment

Leave a Reply

Your email address will not be published. Required fields are marked *