ಏರ್ ಫ್ರೈಯರ್‌ನಲ್ಲಿ ತಯಾರಿಸಿದ ಆಹಾರಗಳು ಏಕೆ ವಿಫಲಗೊಳ್ಳುತ್ತದೆ ಚೆಫ್ ಪಂಕಜ್ ಟಿಪ್ಸ್ ಇಲ್ಲಿದೆ

mail.prabanjas@gmail.com

ನಮ್ಮಲ್ಲಿ ಹಲವರಿಗೆ ಏರ್ ಫ್ರೈಯರ್ ಅನ್ನು ಸರಿಯಾಗಿ ಬಳಸುವುದು ಹೇಗೆ ಎಂದು ತಿಳಿದಿಲ್ಲ. ನಿಮ್ಮ ಏರ್ ಫ್ರೈಯರ್ ಆಹಾರ ಏಕೆ ವಿಫಲಗೊಳ್ಳುತ್ತದೆ ಮತ್ತು ಅದನ್ನು ಹೇಗೆ ಸರಿಪಡಿಸುವುದು ಎಂಬುದು ಇಲ್ಲಿದೆ.

ಬಹಳಷ್ಟು ಜನರು ಏರ್‌ಫ್ರೈಯರ್‌ನ್ನು ಬಳಸುತ್ತಾರೆ. ಆದರೆ ಅದನ್ನು ಯಾವ ರೀತಿ ಸರಿಯಾಗಿ ಬಳಸಬೇಕು ಎನ್ನುವುದು ತಿಳಿದಿರೋದಿಲ್ಲ ಹಾಗಾಗಿ ಏರ್‌ಫ್ರೈಯರ್‌ನಲ್ಲಿ ತಯಾರಿಸಿದ ಆಹಾರ ಅಷ್ಟೊಂದು ರುಚಿಸುವುದಿಲ್ಲ ಹಾಗೂ ಸರಿಯಾಗಿ ಬೇಯೋದಿಲ್ಲ. ನೀವೂ ಕೂಡಾ ಏರ್‌ಫ್ರೈಯರ್‌ ಅನ್ನು ಸರಿಯಾಗಿ ಬಳಸೋದು ಹೇಗೆ ಎಂದು ತಿಳಿದಿಲ್ಲದಿದ್ದರೆ ಚೆಫ್ ಪಂಕಜ್‌ ಬದೌರಿಯಾ ಅವರು ಅದನ್ನು ಬಳಸುವ ಸರಿಯಾದ ವಿಧಾನವನ್ನು ತಮ್ಮ ವಿಡಿಯೋ ಮೂಲಕ ತಿಳಿಸಿದ್ದಾರೆ.

ಅನೇಕರು ಏರ್‌ಫ್ರೈಯರ್‌ನಲ್ಲಿ ಫ್ರೆಂಚ್‌ಫ್ರೈ ತಯಾರಿಸಲು ಟ್ರೈ ಮಾಡ್ತಾರೆ ಆದರೆ ಅದು ಕ್ರಿಸ್ಮಿಯಾಗಿರದೆ ಮೆತ್ತಗಾಗಿರುತ್ತದೆ ಇದಕ್ಕೆ ಕಾರಣವೆಂದರೆ ಏರ್‌ಫ್ರೈಯರ್‌ನಲ್ಲಿ ನಾವು ಒಮ್ಮೆಲೇ ಎಲ್ಲಾ ಕತ್ತರಿಸಿರುವ ಆಲೂಗಡ್ಡೆಯನ್ನು ಹಾಕಿ ಹೈ ಫ್ಲೇಮ್‌ನಲ್ಲಿ ಬೇಯಿಸುವುದು. ಹೀಗೆ ಮಾಡೋದ್ರಿಂದ ಆಲೂಗಡ್ಡೆಯ ಒಳಭಾಗ ಬೇಯುವ ಮೊದಲೇ ಹೊರಭಾಗ ಕಪ್ಪಗಾಗಲಾರಂಭಿಸುತ್ತದೆ. ಅದಕ್ಕೆ ಡಬಲ್ ಬ್ಲಾಸ್ಟ್ ಮಾಡಬೇಕು ಎಂದು ಚೆಫ್ ಪಂಕಜ್ ಹೇಳುತ್ತಾರೆ.

ಆಲೂಗಡ್ಡೆಯ ತುಂಡುಗಳನ್ನೆಲ್ಲಾ ಸಿಂಗಲ್ ಲೇಯರ್‌ನಲ್ಲಿ ಏರ್‌ಫ್ರೈಯರ್‌ನಲ್ಲಿ ಹಾಕಿ ಮೊದಲಿಗೆ ಹತ್ತು ನಿಮಿಷಗಳ ಕಾಲ 140 ಡಿಗ್ರಿ ಸೆ.ನಲ್ಲಿ ಬೇಯಿಸಬೇಕು. ನಂತರ ಅದನ್ನು ಹೊರತೆಗೆದು ಅದರ ಮೇಲೆ ಬ್ರಶ್‌ನಿಂದ ಎಣ್ಣೆಯನ್ನು ಸವರಿ ಮತ್ತೆ ಐದು ನಿಮಿಷಗಳ ಕಾಲ ಹೈ ಟೆಂಪರೇಚರ್‌ನಲ್ಲಿ ಅಂದರೆ 200 ಡಿಗ್ರಿ ಸೆ.ನಲ್ಲಿ ಬೇಯಿಸಬೇಕು. ಹೀಗೆ ಮಾಡೋದ್ರಿಂದ ನಿಮಗೆ ಕ್ರಿಸ್ಮಿಯಾಗಿರುವ ಫ್ರೆಂಚ್‌ಫ್ರೈ ತಯಾರಾಗುತ್ತದೆ.

ಇನ್ನು ಪನೀರ್‌ ಅನ್ನು ಬೇಯಿಸುವಾಗಲೂ ಪನೀರ್ ಹೊರಗಿನಿಂದ ಕೆಂಪಗಾಗಿದ್ದರೂ ಒಳಗಡೆ ಸ್ಪಂಜ್ ರೀತಿ ಇರುತ್ತದೆ. ಪನೀರ್‌ ಟಿಕ್ಕ ಹಾಗೂ ಚಿಕನ್ ಟಿಕ್ಕ ತಯಾರಿಸುವಾಗ ಅದು ಒಳಗಿನಿಂದ ಡ್ರೈ ಆಗಿರುತ್ತದೆ. ಇದನ್ನು ಸರಿಪಡಿಸಬೇಕಾದರೆ ನೀವು ಪನೀರ್ ಅಥವಾ ಚಿಕನ್‌ಗೆ ತಯಾರಿಸುವ ಮಸಾಲೆಯಲ್ಲಿ ಸ್ವಲ್ಪ ಕಡಲೆಹುಡಿಯನ್ನು ಮಿಕ್ಸ್‌ಮಾಡಿ ಪೇಸ್ಟ್‌ ತಯಾರಿಸಿ ಪನೀರ್‌ಗೆ ಸವರಿ ನಂತರ ಅದನ್ನು ಏರ್‌ಫ್ರೈಯರ್‌ನಲ್ಲಿಡಿ. ಇದರಿಂದ ಒಳಗಿನಿಂದಲೂ ಬೇಯುತ್ತದೆ. ಹೊರಗಿನಿಂದಲೂ ಕ್ರಿಸ್ಲ್ಮಿಯಾಗಿರುತ್ತದೆ.
Share This Article
Leave a Comment

Leave a Reply

Your email address will not be published. Required fields are marked *