ಆಲೂಗಡ್ಡೆ ಈರುಳ್ಳಿ ಅಂತೆಯೇ ಇನ್ನೂ ಕೆಲವೊಂದು ಬಗೆಯ ತರಕಾರಿಗಳನ್ನು ಒಟ್ಟಿಗೆ ಇಟ್ಟರೆ ಬೇಗನೇ ಕೊಳೆತು ಬಿಡುತ್ತವೆ!

mail.prabanjas@gmail.com

ಮಾರುಕಟ್ಟೆಯಿಂದ ತಂದಿರುವ ತರಕಾರಿಗಳು, ಕೆಲವು ದಿನಗಳವರೆಗೆ ಒಟ್ಟಿಗೆ ಸಂಗ್ರಹಿಸಿಡುವುದರಿಂದ ಬಹಳ ಬೇಗನೇ ಕೊಳೆತು ಹೋಗುತ್ತವೆ. ಇದರ ಹಿಂದಿನ ಕಾರಣಗಳು ಏನೆಂದರೆ, ನೈಸರ್ಗಿಕವಾಗಿ ಸಿಗುವಂತಹ ಇಂತಹ ತರಕಾರಿಗಳಲ್ಲಿ ಕೆಲವೊಂದು ಎಥಿಲೀನ್‌ (ethylene) ಗ್ಯಾಸ್ ಉತ್ಪತ್ತಿ ಮಾಡುವುದರಿಂದ, ಇವುಗಳ ಜೊತೆಗೆ ಶೇಖರಿಸಿಟ್ಟಿರುವ ಇತರ ಬಗೆಯ ತರಕಾರಿಗಳು ಬಹಳ ಬೇಗನೇ ಹಾಳಾಗುತ್ತವೆ

ಪ್ರಕೃತಿದತ್ತವಾಗಿ ಸಿಗುವ ಎಲ್ಲಾ ಎಲ್ಲಾ ಬಗೆಯ ಆಹಾರ ಪದಾರ್ಥಗಳು ಕೂಡ ಮನುಷ್ಯನಿಗೆ ಉಪಯೋಗಕ್ಕೆ ಬರುತ್ತವೆ.ಅದರಲ್ಲಿ ಹಣ್ಣು ತರಕಾರಿಗಳು ಕೂಡ ಒಂದು. ನಿಸರ್ಗದತ್ತವಾಗಿ ಸಿಗುವ ಇಂತಹ ಆಹಾರಗಳು ನಮ್ಮ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು, ಈ ವಿಚಾರದಲ್ಲಿ ಎರಡು ಮಾತಿಲ್ಲ, ಆದರೆ ಇಲ್ಲಿ ಪ್ರಶ್ನೆ ಏನೆಂದರೆ, ಕೆಲವೊಂದು ತರಕಾರಿಗಳನ್ನು ಜೊತೆಗೆ ಯಾಗಿ ಶೇಖರಣೆ ಮಾಡುವ ಹಾಗಿಲ್ಲ, ಯಾಕೆಂದ್ರೆ ಒಂದರ ಸಂಪರ್ಕಕ್ಕೆ ಮತ್ತೊಂದು ತರಕಾರಿ ಬಂದರೆ, ಅವು ಬೇಗನೇ ಹಾಳಾಗಿ ಬಿಡುತ್ತವೆ, ಎನ್ನುವ ಕಾರಣಕ್ಕೆ. ನಿಮಗೆ ಈ ವಿಚಾರ ಅಚ್ಚರಿ ಅನಿಸಿದರೂ ಕೂಡ ಇದು ವಾಸ್ತವ ಸತ್ಯ

ಟೊಮೆಟೊ ಹಣ್ಣಿನಲ್ಲಿ ಎಥಿಲೀನ್ (ಸಸ್ಯ ಹಾರ್ಮೋನ್ ಆಗಿದೆ) ಗ್ಯಾಸ್ ಅನ್ನು ಹೊರಸೂಸುತ್ತವೆ, ಆದರೆ ಸೌತೆಕಾಯಿಗಳು ಈ ಅನಿಲಕ್ಕೆ ಸೂಕ್ಷ್ಮವಾಗಿ ರುತ್ತವೆ.

ಅವುಗಳನ್ನು ಒಟ್ಟಿಗೆ ಸಂಗ್ರಹಿಸುವುದರಿಂದ ಸೌತೆಕಾಯಿ ಬೇಗನೆ ಹಾಳಾಗ ಬಹುದು. ಆದ್ದರಿಂದ, ಟೊಮೆಟೊ ಮತ್ತು ಸೌತೆಕಾಯಿಗಳನ್ನು ಎಂದಿಗೂ ಒಟ್ಟಿಗೆ ಸಂಗ್ರಹಿಸಬಾರದು.
ಟೊಮೆಟೊ ಕೊಯ್ಲಿನ ನಂತರದ ಶರೀರಶಾಸ್ತ್ರವು (Post-harvest physiology)ದ ಪ್ರಕಾರ ಟೊಮೆಟೊ ಹಣ್ಣು ಕೊಯ್ಲಿನ ನಂತರವೂ ಎಥಿಲೀನ್ ಹಾರ್ಮೋನ್ ಮೂಲಕ ಮಾಗುವುದನ್ನು ಮುಂದುವರೆಸುತ್ತದೆ, ಮತ್ತು ಎಥಿಲೀನ್ ಅನಿಲವನ್ನು ಉತ್ಪಾದಿಸುತ್ತದೆ, ಇದು ನೈಸರ್ಗಿಕ ಸಸ್ಯ ಹಾರ್ಮೋನ್ ಆಗಿದ್ದು, ಇದು ಹಣ್ಣಾಗು ವುದನ್ನು ವೇಗಗೊಳಿಸುತ್ತದೆ.

ಈ ತಪ್ಪು ಪ್ರತಿಯೊಂದು ಮನೆಯಲ್ಲೂ ಸಾಮಾನ್ಯವಾಗಿದೆ. ಜನರು ಸಾಮಾನ್ಯ ವಾಗಿ ಆಲೂಗಡ್ಡೆ ಮತ್ತು ಈರುಳ್ಳಿಯನ್ನು ಒಟ್ಟಿಗೆ ಸಂಗ್ರಹಿಸುತ್ತಾರೆ, ಇದರಿಂದಾಗಿ ಅವು ಬೇಗನೆ ಹಾಳಾಗುತ್ತವೆ. ಆದರೆ ನಾವೆಲ್ಲಾ ಏನು ಅಂದು ಕೊಳ್ಳುತ್ತೇವೆ ಎಂದರೆ ಸರಿಯಾಗಿ ಪರಿಶೀಲಿಸದೆ ಮಾರುಕಟ್ಟೆಯಿಂದ ನಾವು ಹಾಳಾದ ಆಲೂಗಡ್ಡೆ ಮತ್ತು ಈರುಳ್ಳಿಯನ್ನು ಮಾರುಕಟ್ಟೆಯಿಂದ ಖರೀದಿಸಿದ್ದೇವೆ ಅಂದು ಕೊಂಡಿರುತ್ತೇವೆ.

ಆದರೆ ತಪ್ಪು ನಮ್ಮದೇ ಯಾಕೆಂದರೆ ಇಲ್ಲಿ ಈರುಳ್ಳಿ ಹಾಗೂ ಆಲೂಗಡ್ಡೆಯನ್ನು ಯಾವತ್ತಿಗೂ ಕೂಡ ಒಟ್ಟಿಗೆ ಶೇಖರಿಸಿಡಲು ಹೋಗಬಾರದು.ಇಲ್ಲಿ ಈರುಳ್ಳಿ ಯಿಂದ ಹೊರಸೂಸುವ ತೇವಾಂಶ ಮತ್ತು ಅನಿಲಗಳು ಆಲೂಗಡ್ಡೆ ಬೇಗನೆ ಮೊಳಕೆಯೊಡೆಯಲು ಮತ್ತು ಕೊಳೆಯಲು ಕಾರಣವಾಗಬಹುದು. ಆಲೂಗಡ್ಡೆ ಯನ್ನು ಒಣ, ತಂಪಾದ ಸ್ಥಳದಲ್ಲಿ ಸಂಗ್ರಹಿಸಿ, ಆದರೆ ಈರುಳ್ಳಿಯನ್ನು ಚೆನ್ನಾಗಿ ಗಾಳಿ ಇರುವ ಪ್ರದೇಶದಲ್ಲಿ ಇಡಬೇಕು.

Share This Article
Leave a Comment

Leave a Reply

Your email address will not be published. Required fields are marked *