‘ಕನಸು ಕಟ್ಟಿಕೊಂಡು ಚಿತ್ರ ಮಾಡೋರಿಗೆ ಪ್ರೇಕ್ಷಕ 100 ರೂಪಾಯಿ ಕೊಡೋಕೆ ಆಗಲ್ವಾ?’ – ರವಿಚಂದ್ರನ್ ನೇರ ಪ್ರಶ್ನೆ!

mail.prabanjas@gmail.com
ಥಿಯೇಟರ್‌ಗಳಿಗೆ ಜನ ಬರ್ತಿಲ್ಲ. ಉತ್ತಮ ಕನ್ನಡ ಚಿತ್ರಗಳು ಸೋಲುತ್ತಿವೆ. ಹೀಗಾಗಿ, ರವಿಚಂದ್ರನ್‌ ತಮ್ಮ ಅಭಿಪ್ರಾಯವನ್ನ ಫಿಲ್ಟರ್‌ಲೆಸ್‌ ಆಗಿ ಹಂಚಿಕೊಂಡಿದ್ದಾರೆ. ಕನಸು ಕಟ್ಟಿಕೊಂಡು ಚಿತ್ರ ಮಾಡೋರಿಗೆ ಪ್ರೇಕ್ಷಕರು 100 ರೂಪಾಯಿ ಕೊಡೋಕೆ ಆಗಲ್ವಾ ಎಂದು ರವಿಚಂದ್ರನ್ ಪ್ರಶ್ನೆ ಹಾಕಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ಇತ್ತೀಚೆಗೆ ಕನ್ನಡ ಚಿತ್ರಗಳ ನಿರ್ಮಾಣ ಕಡಿಮೆ ಆಗುತ್ತಿದೆ. ಬಿಡುಗಡೆಯಾದ ಚಿತ್ರಗಳನ್ನ ನೋಡಲು ಪ್ರೇಕ್ಷಕರು ಥಿಯೇಟರ್‌ಗೆ ಬರುತ್ತಿಲ್ಲ. ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಕುಂಟುತ್ತಾ ಸಾಗುತ್ತಿದೆ. ಒಳ್ಳೆಯ ಕಂಟೆಂಟ್ ಚಿತ್ರಗಳೂ ಸೊರಗುತ್ತಿದೆ. ಇದನ್ನೆಲ್ಲಾ ಗಮನಿಸುತ್ತಲೇ ಬಂದಿರುವ ‘’ಕನಸು ಕಟ್ಟಿಕೊಂಡು ಚಿತ್ರ ಮಾಡೋರಿಗೆ ಪ್ರೇಕ್ಷಕ 100 ರೂಪಾಯಿ ಕೊಡೋಕೆ ಆಗಲ್ವೇನ್ರೀ’’ ಎಂದು ನೇರವಾಗಿ ಪ್ರಶ್ನೆ ಕೇಳಿದ್ದಾರೆ.

ಹೌದು.. ಇತ್ತೀಚೆಗಷ್ಟೇ ‘ಚಿತ್ರದ ಟ್ರೇಲರ್‌ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಂದವರು . ಇದೇ ವೇಳೆ ತಮ್ಮ ಮನಸ್ಸಿನಿಂದ ರವಿಚಂದ್ರನ್ ಕೆಲವೊಂದಷ್ಟು ಮಾತುಗಳನ್ನಾಡಿದರು. ಅದೇನಪ್ಪಾ ಅಂದ್ರೆ…

ಜನ ಥಿಯೇಟರ್‌ನಲ್ಲಿ ಸಿನಿಮಾ ನೋಡುತ್ತಿರುತ್ತಾರೆ. ಅವರಿಗೆ ಹೋಗಿ ಕ್ಯಾಮರಾ ಹಿಡಿಯುತ್ತೀರಾ. ಪ್ರೇಕ್ಷಕರನ್ನ ಸಿನಿಮಾ ಥಿಯೇಟರ್‌ನಲ್ಲಿ ಪಿಕ್ಚರ್ ನೋಡೋಕೆ ಬಿಡಿ. ಜನ ಮೈ ಮರೆಯಬೇಕು. ಇವತ್ತು ಪ್ರೇಕ್ಷಕರನ್ನೂ ಆಕ್ಟರ್‌ ಮಾಡಿದ್ಧೀರಾ. ಥಿಯೇಟರ್‌ನಿಂದ ಆಚೆ ಬರುವ ಹಾಗಿಲ್ಲ, ಬಾಯಿಗೆ ಹೋಗಿ ಮೈಕ್ ತುರುಕಿಸಿರುತ್ತೀರಾ.. ಹೇಗಿದೆ ಪಿಕ್ಚರ್ ಅಂತ. ಏನು ಹೇಳ್ತಾರೆ?’’

‘’ಪ್ರೇಕ್ಷಕರು ಥಿಯೇಟರ್ ಒಳಗೆ ಹೋಗಿ ಸಿನಿಮಾ ನೋಡಬೇಕು. ಒಬ್ಬನಿಗಾಗಿ 100 ರೂಪಾಯಿ ಟಿಕೆಟ್ ಕೊಟ್ಟು ಚಿತ್ರ ನೋಡೋದಿಲ್ವಾ? ಸಿನಿಮಾ ಚೆನ್ನಾಗಿಲ್ಲ ಅಂದರೂ ಪರ್ವಾಗಿಲ್ಲ 100 ರೂಪಾಯಿ ಕಳಿಯಿರಿ. ಆಸೆ ಪಟ್ಟು, ಕನಸು ಕಟ್ಟಿಕೊಂಡು ಸಿನಿಮಾ ಮಾಡೋರಿಗೆ ಒಬ್ಬೊಬ್ಬ ಪ್ರೇಕ್ಷಕ 100 ರೂಪಾಯಿ ಕೊಡೋಕೆ ಆಗಲ್ವೇನ್ರೀ? ಕೊಡ್ರಿ.. ಒಂದಷ್ಟು ಸಿನಿಮಾ ಗೆಲ್ಲಿಸಿ. ಗಂಟೇನೂ ಹೋಗೋದಿಲ್ಲ’’

‘’ಮೊಬೈಲ್ ಯಾವತ್ತು ಬಿಡ್ತೀರೋ.. ಲೈಕ್ ಮಾಡೋದು, ಕಾಮೆಂಟ್ ಮಾಡೋದು ಯಾವತ್ತು ಬಿಡ್ತೀರೋ.. ಆಗ ಚೆನ್ನಾಗಿರುತ್ತದೆ. ಇನ್ನೂ ಒಂದು ರೀಲ್ ಆಗಿರಲ್ಲ.. ಕಾಮೆಂಟ್ ಶುರುವಾಗುತ್ತದೆ. ಒಂದು ರೀಲ್‌ನಲ್ಲಿ ಹೇಗೆ ಗೊತ್ತಾಗುತ್ತೆ.. ಚಿತ್ರ ಚೆನ್ನಾಗಿದ್ಯಾ, ಇಲ್ವಾ ಅಂತ. ಕಾಮೆಂಟ್ ಮಾಡೋದು ಮುಖ್ಯವಾ? ಪ್ರತಿಯೊಂದರಲ್ಲೂ ಕೊಂಕು ಕಂಡುಹಿಡಿಯೋದು ಮುಖ್ಯನಾ? ಕೊನೆಯವರೆಗೂ ಪ್ರೀತಿಯಿಂದ ಸಿನಿಮಾ ನೋಡಿ. ಅಮೇಲೆ ಥಿಯೇಟರ್ ಕಲೆಕ್ಷನ್‌ ತಾನಾಗೇ ಎದ್ದೇಳುತ್ತೆ’’ ಅಂತ ಸದ್ಯದ ವಾಸ್ತವ ಚಿತ್ರಣದ ಬಗ್ಗೆ ರವಿಚಂದ್ರನ್ ತಮ್ಮ ಅಭಿಪ್ರಾಯ, ಅಸಮಾಧಾನವನ್ನ ಹೊರಹಾಕಿದರು.

Share This Article
Leave a Comment

Leave a Reply

Your email address will not be published. Required fields are marked *